Wed. Nov 20th, 2024

Belthangadi: ಇತಿಹಾಸ ಬರೆಯಲು ಸಜ್ಜಾದ ತುಳು ಚಿತ್ರರಂಗ – ಪ್ರೇಕ್ಷಕರ ಮನಸಿನಲ್ಲಿ ಸಹಿ ಹಾಕಲು ಬರ್ತಿದೆ “ದಸ್ಕತ್”

ಬೆಳ್ತಂಗಡಿ:(ನ.5) ಇತ್ತೀಚೆಗಂತು ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಸ್ವಲ್ಪ ಜಾಸ್ತಿನೆ ಅನ್ಬಹುದು. ಅದ್ರಲ್ಲೂ ಹೊಸ ಕನಸುಗಳೊಂದಿಗೆ ಕಾಲಿಡುವ ಯುವಕರ ತಂಡ ಪ್ರೇಕ್ಷಕರನ್ನ ತನ್ನತ್ತ ಸೆಳೆಯಲು ನೂತನ ಪ್ರಯತ್ನಗಳನ್ನ ಮಾಡುವಲ್ಲಿ ಶ್ರಮ‌ ಪಡುತ್ತಿದ್ದಾರೆ. ಇದೀಗ ಈ ಸಾಲಿಗೆ ಸೇರ್ಪಡೆಯಾಗಲು ತಂಡವೊಂದು ಸಜ್ಜಾಗಿದ್ದು ದಸ್ಕತ್ ತುಳು ಚಲನಚಿತ್ರದ ಮುಖೇನ ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ.

ಇದನ್ನೂ ಓದಿ: ⭕ಹಾಸನ: ಹಸೆಮಣೆ ಏರಬೇಕಿದ್ದ ಕಾನ್ಸ್‌ಟೇಬಲ್‌ನ ಬರ್ಬರ ಹತ್ಯೆ!!!

ತುಳು ಚಲನಚಿತ್ರ ರಂಗದಲ್ಲಿ ಹೊಸತನದ ಅಲೆಯನ್ನ ಸೃಷ್ಟಿ ಮಾಡಿ ಆ ಮುಖೇನ ಪ್ರೇಕ್ಷಕರ ಮನ ಗೆಲ್ಲುವ ತವಕದಲ್ಲಿರುವ ತಂಡ, ತುಳುನಾಡಿನ‌ ಮಣ್ಣಿನ‌ ಸೊಗಡಿನೊಂದಿಗೆ, ಕೇಪುಲ ಪಲ್ಕೆಯ ಕಥೆಯನ್ನ ನಮಗೆ ಊಣಬಡಿಸಿ ನಮ್ಮೆಲ್ಲರ ಮನಸ್ಸಲ್ಲಿ ಸಹಿ ಹಾಕಲು ದಸ್ಕತ್ ತಂಡದವರು ತಯಾರಾಗಿದ್ದಾರೆ.

ಈಗಾಗಲೇ ಬಹುತೇಕ‌ ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ನ ದಿಗ್ಗಜರು ಮತ್ತು ನಾಡಿನ‌ ಜನತೆ ಚಲನಚಿತ್ರದ ಟೀಸರ್ ನೋಡಿ ಮೆಚ್ಚಿಕ್ಕೊಂಡಿದ್ದು ಉತ್ತಮವಾದ ಪ್ರತಿಕ್ರಿಯೆಯನ್ನ ನೀಡಿದ್ದಾರೆ, ಸಿನಿಮಾ ಮೇಕಿಂಗ್, ಸಂಗೀತ ಸಂಯೋಜನೆ, ತುಳುನಾಡಿನ‌ ಸಂಸ್ಕೃತಿ‌ ಮತ್ತು‌ ಪಾತ್ರಗಳಲ್ಲಿನ ನೈಜತೆ ಎಲ್ಲರ ಮನಸ್ಸನ್ನ ಗೆದ್ದಿದ್ದು ಚಲನಚಿತ್ರ ಯಾವಾಗ ಬಿಡುಗಡೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೆಸರಾಂತ ಗಾಯಕ, ಸಂಗೀತ ನಿರ್ದೇಶಕರಾದ ಡಾ।ಗುರುಕಿರಣ್ ಅವರು ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿದ್ದು ಡಿಸೆಂಬರ್ 13 ಕ್ಕೆ ತುಳುನಾಡಿನಾದ್ಯಂತ ದಸ್ಕತ್ ತುಳು ಚಿತ್ರ ತೆರೆ ಮೇಲೆ ಅಬ್ಬರಿಸಲಿದೆ.


ಕೃಷ್ಣ ಜೆ ಪಾಲೆಮಾರ್ ಅರ್ಪಿಸುವ ಈ ಚಿತ್ರವನ್ನ ರಾಘವೇಂದ್ರ ಕುಡ್ವ ನಿರ್ಮಿಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಬಹುಮುಖ ಪ್ರತಿಭೆ
ಅನೀಶ್ ಪೂಜಾರಿ ವೇಣೂರು ಆಕ್ಷನ್ ಕಟ್ ಹೇಳಿದ್ದಾರೆ. ಛಾಯಾಗ್ರಹಣದಲ್ಲಿ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನ ಗಣೇಶ್ ನೀರ್ಚಾಲ್, ಸಂಗೀತ ಸಂಯೋಜನೆಯಲ್ಲಿ ಸಮರ್ಥನ್ ಎಸ್ ರಾವ್ ಜೊತೆಯಾಗಿದ್ದು, ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ , ಮನೋಜ್ ಆನಂದ್ , ದೀಕ್ಷಿತ್ ಧರ್ಮಸ್ಥಳ ತಂಡದ ಶಕ್ತಿಯಾಗಿದ್ದಾರೆ.


ಹೊಸ ತಾರಾ ಬಳಗ ಹೊಂದಿರುವ ಚಿತ್ರದಲ್ಲಿ ದೀಕ್ಷಿತ್ ಕೆ ಅಂಡಿಂಜೆ , ನೀರಜ್ ಕುಂಜರ್ಪ ಮೋಹನ್ ಶೇಣಿ ಮಿಥುನ್ ರಾಜ್ , ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ , ನವೀನ್ ಬೋಂದೆಲ್ , ಯೋಗೀಶ್ ಶೆಟ್ಟಿ , ಚೇತನ್ ಪಿಲಾರ್ ,ತಿಮ್ಮಪ್ಪ ಕುಲಾಲ್ ಮುಂತಾದವರು ಬಣ್ಣ ಹಚ್ಚಿದ್ದು ಜನರ ಆಶೀರ್ವಾದಕ್ಕೆ ಕಾಯುತ್ತಿದ್ದಾರೆ.


ಹೊಸ ತಂಡವಾಗಿ ಕಂಡರು ಈಗಾಗಲೇ‌ ವೆಬ್ ಸಿರೀಸ್, ತುಳು, ಕನ್ನಡ ಚಲನಚಿತ್ರಲ್ಲಿ ಕೆಲಸ‌ ಮಾಡಿದ ಅನುಭವ ಇರುವ ದಸ್ಕತ್ ತಂಡ ಹೊಸತನವನ್ನ ನೀಡಿ, ತುಳು ಚಲನಚಿತ್ರ ರಂಗದಲ್ಲೊಂದು ಮೈಲಿಗಲ್ಲು ನಿರ್ಮಿಸಲು ಕಾತುರದಿಂದ ಕಾದಿದ್ದಾರೆ.


ಮಣ್ಣಿನ‌ ಸೊಗಡಿನ ದಸ್ಕತ್ ನಮ್ಮೆಲ್ಲರ ಮನಸ್ಸಲ್ಲಿ ಸಹಿ ಹಾಕುವಲ್ಲಿ ನಾವೆಲ್ಲ ಜೊತೆಗಿರುವ, ತುಳು ಚಲನಚಿತ್ರ ಗೆದ್ದು ದಸ್ಕತ್ ತಂಡ ವಿಜಯಿಯಾಗಿ, ತುಳು ನೆಲದ ಮಹತ್ವ ಊರಿಡೀ ಹರಡಲಿ ಎನ್ನುವ ಹಾರೈಕೆ ನಮ್ಮದು.

Leave a Reply

Your email address will not be published. Required fields are marked *