Wed. Nov 20th, 2024

ಕಾಸರಗೋಡು (ನ. 07 ) : ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಅವರ ಕಾರಿಗೆ ತಡೆಯೊಡ್ಡಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಮಾಜಿ ಸಂಸದ ಹಾಗೂ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಜೊತೆ ನಳೀನ್ ಕುಮಾರ್ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಕಾಸರಗೋಡು ಬೋವಿಕಾನ ಎಂಬಲ್ಲಿ ಸ್ವಾಮೀಜಿಗಳ ಕಾರನ್ನು ತಡೆದು ದಾಳಿ ನಡೆಸಲಾಗಿದ್ದು ಈ ದಾಳಿ ಖಂಡನೀಯ. ಅನ್ಯಕೋಮಿನ ಯುವಕರ ತಂಡದಿಂದ ಕಾರು ತಡೆದು ಗಲಾಟೆ ನಡೆಸಿದ ಅರೋಪ ಕೇಳಿ ಬಂದಿದೆ.

ಕೇರಳ ಸರ್ಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಘಟನೆ ನಡೆದು ಎರಡು ದಿನವಾದ್ರೂ ಆರೋಪಿಗಳ ಬಂಧನ ಆಗಿಲ್ಲ. ಮತಬ್ಯಾಂಕ್ ಹಿಂದೆ ಬಿದ್ದಿರೋ ಕೇರಳದ ಕಮ್ಯುನಿಸ್ಟ್ ಸಿ.ಎಂ ಪಿಣರಾಯಿ ವಿಜಯನ್ ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇರಳ ಗೃಹ ಸಚಿವರು ಕೂಡ ಪ್ರಕರಣದ ತನಿಖೆಗೆ ಆದೇಶ ಮಾಡಿಲ್ಲ.

ಇದರಿಂದ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮತ್ತಷ್ಟು ಘಟನೆ ನಡೀಬಹುದು ಎಂಬ ಭಯ ಶುರುವಾಗಿದೆ. ಕಮ್ಯುನಿಸ್ಟ್ ಸರ್ಕಾರ ಮತಾಂಧ ಶಕ್ತಿಗಳ ಹಿಂದೆ ನಡೀತಾ ಇದೆ ಅನಿಸುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಕಳ್ಳರು ನುಗ್ಗುತ್ತಿದ್ದಾರೆ. ಈ ಭಾಗದ ದೇವಸ್ಥಾನಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪಿಣರಾಯಿ ಸರ್ಕಾರ ಎಡವಿದೆ. ಸ್ವಾಮೀಜಿಗಳ ಜೊತೆ ಇಡೀ ಹಿಂದೂ ಸಮಾಜ ಇದೆ, ಕೈ ಕಟ್ಟಿ ಕುಳಿತುಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *