ಮೇಷ ರಾಶಿ: ನಿಮಗೆ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ಅನ್ನಿಸದೇ ಹೋಗಬಹುದು. ಇಂದು ಅಂದುಕೊಂಡ ದೇವರ ಕಾರ್ಯವು ನಡೆಯದೇಹೋಗಬಹುದು. ಯಾವುದಾದರೂ ಸಮಾಜ ಬಾಹಿರ ಕೃತ್ಯಗಳಲ್ಲಿ ಸಿಕ್ಕಿಕೊಳ್ಳುವ ಸಂಭವವಿರಲಿದೆ. ಸ್ತ್ರೀಯರಿಗೆ ನಾನಾ ರೀತಿಯಿಂದ ಅನುಕೂಲವಾಗಬಹುದು. ಇಂದಿನ ಕಾರ್ಯಗಳಲ್ಲಿ ಪ್ರಗತಿ ಇರಲಿದ್ದು ಸಂತೋಷವಾಗುವುದು. ಉದ್ಯೋಗದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಸಾದಿಷ್ಟವಾದ ಭೋಜನದಿಂದ ಸಂತೃಪ್ತಿ ಇರಲಿದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ.
ವೃಷಭ ರಾಶಿ: ವೃತ್ತಿಯಲ್ಲಿ ಹೊಂದಾಣಿಕೆಯನ್ನು ರೂಢಿಸಿಕೊಳ್ಳುವಿರಿ. ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ಅಧಿಕ ಖರ್ಚಿನಿಂದ ಇಂದಿನ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ವಾಸಸ್ಥಳವನ್ನು ಬದಲಿಸಬೇಕಾಗುವುದು. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ತಾಯಿಯಿಂದ ನಿಮಗೆ ಲಾಭವಾಗಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು.
ಮಿಥುನ ರಾಶಿ: ಸಕಾರಾತ್ಮಕ ಅಂಶಗಳನ್ನು ಹೆಚ್ಚು ಸ್ವೀಕರಿಸಿ. ಇಂದು ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಅವಕಾಶವು ನಿಮಗೆ ಸಿಗುವುದು. ನಂಬಿಕೆಯು ಭಗ್ನವಾಗಬಹುದು. ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಸ್ನೇಹಿತರಿಗೆ ಸ್ಪಂದಿಸಬೇಕಾಗುವುದು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಮನಡಾಗುವುದು. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ.
ಕರ್ಕಾಟಕ ರಾಶಿ: ಖರೀದಿಸಿದ ವಸ್ತುಗಳನ್ನು ಉಪಭೋಗ ಮಾಡಲಾಗದು. ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ಹಿತಶತ್ರುಗಳ ಕಾರಣದಿಂದ ಅವಕಾಶದಿಂದ ವಂಚಿತರಾಗುವಿರಿ. ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಇಂದು ಕಿಂಚಿತ್ತಾದರೂ ಪರಹಿತವನ್ನು ಬಯಸಿ. ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು.
ಸಿಂಹ ರಾಶಿ: ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕೆಟ್ಟ ಕೆಲಸಕ್ಕೆ ಪ್ರೋತ್ಸಾಹ ಕೊಡುವಿರಿ. ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹವಿರುವುದು. ಗೆಲುವು ಕಷ್ಟಸಾಧ್ಯವಾದೀತು. ಅನಿರೀಕ್ಷಿತ ಪ್ರಯಾಣವಾದರೂ ಕಾರ್ಯದಲ್ಲಿ ಜಯ ಸಿಕ್ಕೀತು. ಬಹಳ ದಿನಗಳ ಅನಂತರ ಬಂಧುಗಳ ಮನೆಗೆ ಹೋಗುವುದರಿಂದ ಉತ್ತಮ ಆತಿಥ್ಯ ಪ್ರಾಪ್ತವಾಗುವುದು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ.
ಕನ್ಯಾ ರಾಶಿ: ಇನ್ನೊಬ್ಬರ ಬಗ್ಗೆ ಪ್ರತಿಸ್ಪಂದವಿರಲಿ. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಮಾನಸಿಕ ಆಘಾತವು ಇಂದು ಅನಿರೀಕ್ಷಿತ ಆಗಬಹುದು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ನಿಮ್ಮ ತಪ್ಪಿನಿಂದ ಹಿರಿಯರ ಕೆಂಗಣ್ಣಿಗೆ ಗುರಿಯಾಗುವಿರಿ. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ನೀವು ಇನ್ನೊಬ್ಬರ ಮೇಲಿನ ಅವಲಂಬನೆಯನ್ನು ಕಡಿಮೆಮಾಡುವಿರಿ.
ತುಲಾ ರಾಶಿ: ನೌಕರರಿಗೆ ಸರಿಯಾದ ಜವಾಬ್ದಾರಿಯನ್ನು ಕೊಡುವಿರಿ. ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು.
ವೃಶ್ಚಿಕ ರಾಶಿ: ಧಾರ್ಮಿಕ ಆಚರಣೆಯನ್ನು ಸಂಭ್ರಮದಿಂದ ಮಾಡುವಿರಿ. ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ಉದ್ಯಮವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು.
ಧನು ರಾಶಿ: ಚರಾಸ್ತಿಯ ಹಂಚಿಕೆಯನ್ನು ನೀವು ಪಕ್ಷಪಾತದಿಂದ ಮಾಡುವಿರಿ. ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಪ್ರೇಮವು ಸಾಕೆನಿಸಬಹುದು. ಸುಮ್ಮನೇ ಕುಳಿತುಕೊಳ್ಳುವುದು ಇಷ್ಟವಾಗದು. ಸಂತಾನ ಯೋಗದಿಂದ ನಿಮಗೆ ಖುಷಿ ಸಿಗಲಿದೆ. ಎಂದೋ ಮಾಡಿದ ಕಾರ್ಯವು ಇಂದು ನಿಮ್ಮನ್ನು ಬಂದು ಸೇರಬಹುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ.
ಮಕರ ರಾಶಿ: ಬೇಕಾದ ವಸ್ತುಗಳನ್ನು ಅಗ್ಗದಲ್ಲಿ ಖರೀದಿಸಲು ಪ್ರಯತ್ನಿಸುವಿರಿ. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಸಹಿಸಲಾಗದ ದೇಹಪೀಡೆಯಿಂದ ಒದ್ದಾಡುವಿರಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಅಭ್ಯಾಸವನ್ನು ನಿಲ್ಲಿಸದೇ ನಿರಂತರವಾಗಿಸುವಿರಿ. ಮರಣಭೀತಿಯು ಕಾಡಬಹುದು. ಎಲ್ಲರಿಂದ ದೂರವಾಗಲು ಬಯಸುವಿರಿ.
ಕುಂಭ ರಾಶಿ: ಹಿರಿಯರಾಗಿ ಉತ್ತಮ ಮಾರ್ಗದರ್ಶನ ಮಾಡಬೇಕಾಗುವುದು. ಇಂದು ಅಧಿಕ ಸಂಪತ್ತಿನ ವ್ಯಯ ಆಗುವುದು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾದೀತು. ನಿಮ್ಮ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ.
ಮೀನ ರಾಶಿ: ನಿಮ್ಮ ಮೂಲ ಧನವನ್ನು ತೆಗೆಯಬೇಕಾಗಬಹುದು. ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ವಿಶ್ವಾಸಾರ್ಹ ವ್ಯಕ್ತಿಗಳಿಗೆ ಮಾತ್ರ ಸಾಲವನ್ನು ಕೊಡುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು.