ಉಜಿರೆ:(ನ.8) ನವೆಂಬರ್ 6 ರಂದು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ಶಾಲಾ ಸಭಾಂಗಣದಲ್ಲಿ ಚಿಟ್ಟೆಗಳ ವರ್ತನೆಯ ಜೀವಶಾಸ್ತ್ರ ಎಂಬ ಕಾರ್ಯಗಾರವನ್ನು ಎಸ್ ಡಿ ಎಮ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ್ದರು.
ಇದನ್ನೂ ಓದಿ: 💠Madhya Pradesh: ವಿಸ್ಮಯ ಅಂದ್ರೆ ಇದೆ ಅಲ್ವಾ!!
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ವಂದನೀಯ ಫಾ| ವಿಜಯ್ ಲೋಬೊ ಇವರು ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ತಿರುಮಲೇಶ್ ರಾವ್ ಏನ್ ಕೆ, ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ದೀಪಕ್ ನಾಯಕ್ ಇವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು ಚಿಟ್ಟೆಗಳ ಜೈವಿಕ ನಡವಳಿಕೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಯಾದ ಡಾ.ದೀಪಕ್ ನಾಯಕ್ ಅವರು ಚಿಟ್ಟೆಗಳ ವರ್ತನೆಯ ಮಾದರಿಗಳ ಬಗ್ಗೆ ಅಮೂಲ್ಯವಾದ ಜ್ಞಾನವನ್ನು ನೀಡಿದರು ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಾಣಿಶಾಸ್ತ್ರದ ತಿಳುವಳಿಕೆಯನ್ನು ಮೂಡಿಸಿದರು.
ಪ್ರಶಿಕ್ಷಣಾರ್ಥಿ ಜಿಸ್ನಾ ಇವರು ಸ್ವಾಗತಿಸಿ ಪ್ರಶಿಕ್ಷಣಾರ್ಥಿ ಸುಶ್ಮಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿ ಅಖಿಲ ಇವರು ವಂದಿಸಿದರು.