ಪದ್ಮುಂಜ:(ನ.8) ತೋಟಗಾರಿಕೆ ಇಲಾಖೆ ಬೆಳ್ತಂಗಡಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಪದ್ಮುಂಜ, ಹಾಗೂ ಕಣಿಯೂರು ಗ್ರಾಮ ಪಂಚಾಯತ್ ಇದರ ಸಹಭಾಗಿತ್ವದಲ್ಲಿ
ಇದನ್ನೂ ಓದಿ: ⭕ಸುಳ್ಯ: ಪಕ್ಕಾಸಿಗೆ ನೇಣು ಹಾಕಿಕೊಂಡು 26 ರ ಯುವಕ ಆತ್ಮಹತ್ಯೆ!!
ತೋಟಗಾರಿಕೆ ಇಲಾಖೆ 2024-25 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಅಡಿಕೆ ಬೆಳೆ ಮತ್ತು ಕಾಳು ಮೆಣಸು ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನ 07 ರಂದು ಪದ್ಮುಂಜ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾದ ವಿಟ್ಲ ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳಾದ ಡಾ. ಭವಿಷ್ಯ ಮಾಹಿತಿ ನೀಡಿದರು. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಕಾರ್ಯಕ್ರಮ ಉದ್ಘಾಟಿಸಿ ರೈತರು ಇಂತಹ ಯಾವುದೇ ಮಾಹಿತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಪಾಂಜಾಳ,ಕಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಾನಕಿ, ಪದ್ಮುಂಜಾ ಸಿ ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಂಕಿತಾ ಬಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಚಂದ್ರಶೇಖರ್, ಮಲ್ಲಿನಾಥ್ ಉಪಸ್ಥಿತರಿದ್ದರು. ಹೆಚ್ಚಿನ ರೈತರು ತರಬೇತಿ ಶಿಬಿರ ಮಾಹಿತಿ ಪಡೆದುಕೊಂಡರು.