ಹಾಸನ:(ನ.8) ಕಂಚಿ ಕಾಮಕೋಟಿ ಪೀಠಾಧ್ಯಕ್ಷ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹಾಸನದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯಕ್ಕೆ ಭೇಟಿಕೊಟ್ಟಿದ್ದಾರೆ.
ಇದನ್ನೂ ಓದಿ: 🐝ಉಜಿರೆ:(ನ.11- ನ.20) ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಜೇನು ಸಾಕಾಣಿಕೆ ಉಚಿತ ತರಬೇತಿ
ಶೀಗಳ ವಿಜಯಾತ್ರೆ ಬೆಂಗಳೂರಿನಿಂದ ಆರಂಭವಾಗಿ ಹಾಸನ ಬಳಿಕ ಧರ್ಮಸ್ಥಳದಲ್ಲಿ ಸಮಾಪ್ತಿಗೊಳ್ಳಲಿದೆ.
ವಿಜಯಾತ್ರೆ ಹಿನ್ನೆಲೆ ಆಗಮಿಸಿದ ಕಂಚಿ ಮಠದ ಶ್ರೀಗಳನ್ನು ಅತ್ಯಂತ ಭಕ್ತಿಪೂರ್ವಕವಾಗಿ ಎಸ್.ಡಿ.ಎಂ ಕಾಲೇಜಿನ ಆಡಳಿತ ಮಂಡಳಿಯವರು, ಬೋಧಕರು, ಊರಿನ ಮಹನೀಯರು ಸ್ವಾಗತಿಸಿದರು. ಕಾಲೇಜಿನ ಆಡಿಟೋರಿಯಂನಲ್ಲಿ ಸ್ವಾಗತ ಸಭೆಯನ್ನು ಕೂಡ ಆಯೋಜನೆ ಮಾಡಿ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳ ಜೊತೆಗೆ 60 ಶಿಷ್ಯ ವರ್ಗದವರು ಕೂಡ ಜೊತೆಗಿದ್ದು, ಎಸ್.ಡಿ. ಎಂ ಮಹಾವಿದ್ಯಾಲಯದ ಆವರಣದಲ್ಲಿರುವ ಹಳ್ಳದ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಗಳ ಪೂಜಾ ಕೈಂಕರ್ಯ ಮತ್ತು ಆಶೀರ್ವಾಚನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಹಾಸನದಿಂದ ಶ್ರೀಗಳು ನೇರವಾಗಿ ನವೆಂಬರ್ 9 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳದಲ್ಲಿ ನೂತನವಾಗಿ ವಿಸ್ತಾರಗೊಂಡಿರುವ ಅನ್ನಪೂರ್ಣ ಛತ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಧರ್ಮಸ್ಥಳದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಮತ್ತು ಪ್ರವಚನದಲ್ಲಿ ಭಾಗಿಯಾಗಲಿದ್ದಾರೆ.