Wed. Nov 20th, 2024

Bandaru:(ನ.14) ಅಮೃತವಾಹಿನಿ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ನಿ.) ಬಂದಾರು ಇದರ ರಜತ ಮಹೋತ್ಸವದ ಪ್ರಯುಕ್ತ ಕೆ.ವಿ.ಜಿ. ದಂತ ಮಹಾ ವಿದ್ಯಾಲಯ ಇದರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಸಾಮಾನ್ಯ ಪರೀಕ್ಷೆ

ಬಂದಾರು: (ನ.11) ಅಮೃತವಾಹಿನಿ ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ನಿ.) ಬಂದಾರು ಇದರ ರಜತ ಮಹೋತ್ಸವದ ಪ್ರಯುಕ್ತ ಕೆ.ವಿ.ಜಿ. ದಂತ ಮಹಾ ವಿದ್ಯಾಲಯ ಇದರ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಸಾಮಾನ್ಯ ಪರೀಕ್ಷೆಯು ನವೆಂಬರ್‌.14 ರಂದು ಬೆಳಿಗ್ಗೆ. 9:30 ರಿಂದ 2 ರವರೆಗೆ ಸಂಘದ ವಠಾರ , ಬಂದಾರಿನಲ್ಲಿ ನಡೆಯಲಿದೆ.

ಇದನ್ನೂ ಓದಿ: 🩺ಉಜಿರೆ: ಎಸ್ ಡಿ ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ವತಿಯಿಂದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.)ದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಕಬಿಲಾಲಿಯವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸುಳ್ಯ ಕೆ.ವಿ.ಜಿ. ದಂತ ವಿದ್ಯಾಲಯ ಕುರುಂಜಿ ಬಾಗ್ ನ ದಂತ ವೈದ್ಯ ಡಾ. ದಯಾಕರ ಎಮ್. ಎಮ್., ಬಂದಾರು ಸಮುದಾಯ ಆರೋಗ್ಯ ಅಧಿಕಾರಿ ಜಗದೀಶ ಎಂ. ವಿ., ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಜಗದೀಶ ಗೌಡ ಕೊಂಬೇಡಿ, ಸುಳ್ಯ ಕೆ.ವಿ.ಜಿ. ದಂತ ಮಹಾ ವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯಂತ್ ತಳೂರು, ಬಂದಾರು ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಶ್ರೀಮತಿ ಸುನಿತಾ ಹೆಗ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *