ಬೆಂಗಳೂರು:(ನ.11) ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ಸಹಾಯದಿಂದ ಜೈಲಿನಿಂದ ಆಚೆ ಬಂದಿದ್ದ ವ್ಯಕ್ತಿಯೋರ್ವ ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆಯೊಂದು ನಡೆದಿದೆ.
ನವೆಂಬರ್ 8 ರ ರಾತ್ರಿ ಬೆಂಗಳೂರಿನ ಹೊರವಲಯದಲ್ಲಿ ರಾತ್ರಿ ಜೋಡಿಕೊಲೆ ನಡೆದಿತ್ತು. ಬಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಎನ್ನುವವರನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಸುರೇಶ್ ಎಂಬಾತನನ್ನು ಬಂಧನ ಮಾಡಿದ್ದಾರೆ.
ನಂತರ ಈ ಸುರೇಶ್ ಯಾರು ಎನ್ನುವುದರ ಹಿನ್ನೆಲೆ ಬಹಿರಂಗವಾಗಿದೆ.
ಸುರೇಶ್ ಈ ಹಿಂದೆ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಆದರೆ ಈತನಿಗೆ ಶ್ಯೂರಿಟಿ ಹಣ ನೀಡಲು ಯಾರೂ ಕೂಡಾ ಬಂದಿರದ ಕಾರಣ ಜೈಲಿನಲ್ಲೇ ಇದ್ದ. ಈ ಸಮಯದಲ್ಲಿ ನಟ ದುನಿಯಾ ವಿಜಯ್ ಅವರು ಕೆಲವೊಂದು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು.
ಸುರೇಶ್ ಇವರಲ್ಲಿ ಒಬ್ಬನಾಗಿದ್ದ. ಜೈಲಿನಿಂದ ಹೊರ ಬಂದ ಸುರೇಶ್ ಮಾರ್ಕೆಟ್ವೊಂದರಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡುತ್ತಾ ಜೀವನ ಕಳೆಯುತ್ತಿದ್ದ. ಮಾರ್ಕೆಟ್ ಪಕ್ಕದಲ್ಲಿ ನಾಗೇಶ್ ಮತ್ತು ಮಂಜುನಾಥ್. “ನೀನು ಕಳ್ಳ, ಕೊಲೆಗಾರ” ಎಂದು ಸುರೇಶ್ಗೆ ಹೀಯಾಳಿಸುತ್ತಿದ್ದುದರಿಂದ ಸಿಟ್ಟುಗೊಂಡ ಸುರೇಶ್ ಇಬ್ಬರನ್ನೂ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಸುರೇಶ್ನನ್ನು ಬಂಧಿಸಿದ್ದಾರೆ.