ಬೆಳ್ತಂಗಡಿ:(ನ.12) ಶ್ರೀ ಆದಿಚುಂಚನಗಿರಿ ಶಾಖಾ ಮಠ ಮಂಗಳೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ ಕರಾವಳಿ ಭಾಗದ 25 ಮಂದಿ ಸಾಧಕರಿಗೆ ಕೊಡಲುದ್ದೇಶಿಸಿದ “ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ”ಗೆ ಕೃಷಿ ಕ್ಷೇತ್ರದ ಅಪೂರ್ವ ಸಾಧಕ, ನಿವೃತ್ತ ಯೋಧ ಕಾಂಚೋಡು ಗೋಪಾಲಕೃಷ್ಣ ಭಟ್ ಅವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ⭕ಪುತ್ತೂರು: ಪುತ್ತೂರಿನ ಬಾಲಕಿಯರ ಹಾಸ್ಟೆಲ್ ಒಳಗೆ ನುಗ್ಗಿದ ಆಗಂತುಕ
ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಈಗಿನ ಪೀಠಾಧಿಪತಿ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಮತ್ತು ಮಂಗಳೂರು ಶಾಖಾಮಠದ ಯತಿವರೇಣ್ಯರಾದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಈ ಎಲ್ಲಾ ಸಾಧಕರನ್ನು ಗೌರವಿಸಲಾಗುವುದು.
ಕಾಂಚೋಡು ಗೋಪಾಲಕೃಷ್ಣ ಭಟ್ ಅವರು ನಿವೃತ್ತ ಯೋಧರಾಗಿದ್ದು, ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಪ್ರಸ್ತುತ ಅವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ವಿಶೇಷವಾಗಿ ಡ್ರಾಗನ್ ಫ್ರೂಟ್ ಕೃಷಿಯಲ್ಲಿ ಭಾರೀ ಉತ್ಪಾದನೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.