ಧರ್ಮಸ್ಥಳ :(ನ.14) ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಇದನ್ನೂ ಓದಿ: 🐍Viral video: ಕಪ್ಪು ನಾಗರಹಾವಿನ ಜೊತೆ ಯುವತಿಯ ನಾಗಿಣಿ ಡ್ಯಾನ್ಸ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಸಹಾಯ ಸಂಘಗಳಿಗೆ ಲಾಭಾಂಶದ ಚೆಕ್ ವಿತರಣೆ ಮಾಡಿದರು. ಈ ಸಾಲಿನಲ್ಲಿ ರಾಜ್ಯಾದ್ಯಾಂತ ಬೇರೆ ಬೇರೆ ಸ್ವಸಹಾಯ ಸಂಘಗಳಿಗೆ ಸರಿಸುಮಾರು 600 ಕೋಟಿಯಷ್ಟು ಲಾಭಾಂಶವನ್ನು ವಿತರಣೆ ಮಾಡಲಾಗಿದೆ. ಮೂರು ವರ್ಷಗಳಿಗೊಮ್ಮೆ ಲಾಭಾಂಶ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಸ್ವಸಹಾಯ ಸಂಘಗಳ ಬೆಳವಣಿಗೆಯಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯು ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಲಾಭಾಂಶದಲ್ಲಿ ಪ್ರತಿಯೊಬ್ಬ ಮಹಿಳೆಗೂ ಸರಿ ಸುಮಾರು 7000 ಹಣ ಸಿಗುತ್ತಿದೆ. ಕೆಲವರಿಗೆ ಹತ್ತು ಸಾವಿರ ಸಿಗುತ್ತಿದೆ. ಇದು ನಿಜಕ್ಕೂ ಅಭಿವೃದ್ದಿಯ ಸಂಕೇತ ಅಂದರು.
ಮಹಿಳೆಯರಿಗೆ ಕೈಗೆ ಈ ರೀತಿಯ ಲಾಭಾಂಶವನ್ನು ಹಂಚುವ ಮೂಲಕ ಎಸ್. ಕೆ.ಆರ್.ಡಿ.ಪಿ ಪಾರದರ್ಶಕತೆಯನ್ನು ತೋರಿದೆ ಎಂದರು. ಸ್ವಾತಂತ್ರ್ಯ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಭಾರತದ ಅಭಿವೃದ್ಧಿ ನಡೆಸುತ್ತಿದೆ. ರಾಜ್ಯದ ಹಲವು ಭಾಗಗಳ ಮಹಿಳೆಯರು ಈ ಲಾಭಾಂಶ ಪಡೆದಿದ್ದಾರೆ. ಇಡೀ ಭಾರತಕ್ಕೆ ಧರ್ಮಸ್ಥಳ ದ ಯೋಜನೆ ಮಾದರಿಯಾಗಿದೆ. ಮಹಿಳೆಯರಿಗೆ ಎಲ್ಲಾ ರೀತಿಯಲ್ಲೂ ಎಸ್.ಕೆ.ಡಿ.ಆರ್.ಡಿ.ಪಿ ಸಹಕಾರ ನೀಡುತ್ತಿದೆ.
ಮಹಿಳೆಯರ ಅಭಿವೃದ್ದಿಯಲ್ಲಿ ಗ್ರಾಮಾಭಿವೃದ್ದಿ ಯೋಜನೆ ಪ್ರಮುಖ ಪಾತ್ರವಹಿಸುತ್ತಿದೆ ಎಂದರು. 2024ಕ್ಕೆ ಪ್ರಧಾನಿ ಮೋದಿಯ ಆಶಯದಂತೆ ಭಾರತ ಅಭಿವೃದ್ದಿ ಹೊಂದಲಿದೆ. ಮಹಿಳೆಯರ ಅಭಿವೃದ್ದಿ ಮತ್ತು ಸ್ವಸಹಾಯ ಸಂಘಗಳ ಅಭಿವೃದ್ದಿಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
ಬಳಿಕ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು, ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಮಂತ್ರಿಯಾದ್ರೆ ನಮ್ಮ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘಗಳ ಮಹಿಳೆಯರು ಅವರವರ ಮನೆಯ ಆರ್ಥಿಕ ಮಂತ್ರಿಗಳಾಗಿದ್ದಾರೆ ಎಂದರು. ನಮ್ಮ ಸ್ವಸಹಾಯ ಸಂಘದ ಮಹಿಳೆಯರು ಆರ್ಥಿಕ ವಿಚಾರದಲ್ಲಿ ಶಿಸ್ತು ಪಾಲನೆ ಮಾಡುತ್ತಿರುವುದರಿಂದ ಬ್ಯಾಂಕಿನವರು ಯಾವುದೇ ಭಯವಿಲ್ಲದೆ ಸಾಲವನ್ನು ನೀಡುತ್ತಿದ್ದಾರೆ.
ಅದಕ್ಕೆ ಗ್ರಾಮಾಭಿವೃದ್ದಿ ಯೋಜನೆ ಗ್ಯಾರಂಟಿಯಾಗಿ ನಿಂತಿದೆ ಎಂದರು. ಈ ಸಾಲಿನಲ್ಲಿ 24,500 ಕೋಟಿ ಸಾಲವನ್ನು ನೀಡಿದೆ ಎಂದರು. ಸರಿಯಾಗಿ ಸಾಲ ಮರುಪಾವತಿಯಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸದ ಅಧ್ಯಕ್ಷರು ಹೇಮಾವತಿ ವಿ. ಹೆಗ್ಗಡೆ, ನಬಾರ್ಡ್ ಅಧ್ಯಕ್ಷ ಶಾಜಿ ಕೆವಿ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.