Wed. Nov 20th, 2024

Pernaje: ಸ್ವರ ಸಿಂಚನ ಪುರಸ್ಕಾರ -2024 ಪ್ರಶಸ್ತಿಗೆ ವಿದ್ವಾನ್ ಆಲುವ ರಾಜೇಶ್ ಆಯ್ಕೆ

ಪೆರ್ನಾಜೆ :(ನ.16) ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಪಡಿಬಾಗಿಲು ಹಾಗೂ ಕೋಡಂದೂರು ಶಾಖೆಯ ವಿದ್ಯಾರ್ಥಿಗಳಿಂದ ಸಂಗೀತೋತ್ಸವ ಮತ್ತು ಪುರಸ್ಕಾರ ಸಮಾರಂಭವು ನ.1 ರಂದು ವಿಟ್ಲ ಗಾರ್ಡನ್ ಸಭಾಭವನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಭಕ್ತಿಗಾನ ಸಂಗೀತ ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ನಡೆಯಲಿದೆ.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಮಕ್ಕಳ ದಿನಾಚರಣೆ

ವಿದುಷಿ ಅರ್ಚನಾ ರಾಜೇಶ್ ಅವರಿಂದ ಅಪರಾಹ್ನ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದ್ದು ಕಲಾ ಪ್ರೇಮಿಗಳಿಗೆ ಸಂಗೀತದ ರಸದೌತಣ ನೀಡಲಿದೆ.


ಒಂಬತ್ತನೇ ವರ್ಷದ ಸ್ವರ ಸಿಂಚನ ಪುರಸ್ಕಾರ -2024 ಪ್ರಶಸ್ತಿಗೆ ವಿದ್ವಾನ್ ಆಲುವ ಆರ್ ರಾಜೇಶ್ ರನ್ನು ಆಯ್ಕೆ ಮಾಡಲಾಗಿದ್ದು, ಇವರು ಘಟಂನಲ್ಲಿ ತನ್ನ ಕೈಚಳಕವನ್ನು ಪ್ರದರ್ಶಿಸಿ ಉತ್ತಮ ಕಲಾವಿದರಾಗಿದ್ದು ಸ್ವರ ಸಿಂಚನ ಕಲಾತಂಡದ ಸದಸ್ಯರು ಆಗಿದ್ದಾರೆ.


ಸಂಗೀತದ ಪಕ್ಕ ವಾದ್ಯ ಗಳಲ್ಲಿ ಒಂದಾದ ಘಟಂ ವಾದನದಲ್ಲಿ ಮಾಡಿರುವ ಸಾಧನೆಗೆ ಈ ಪ್ರಶಸ್ತಿ ಲಭಿಸಲಿದೆ .ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಪಿಟೀಲು ವಿದ್ವಾನ್ ಕೋಡಂಪಳ್ಳಿ ಗೋಪಕುಮಾರ್ ನಡೆಸಿಕೊಡಲಿದ್ದಾರೆ.


ಮೃದಂಗದಲ್ಲಿ ವಿದ್ವಾನ್ ಡಾ . ಎ ಆರ್ ನಾರಾಯಣ್ ಪ್ರಕಾಶ್ ಕ್ಯಾಲಿಕಟ್ ,ಕೊಳಲು ವಾದನದಲ್ಲಿ ವಿದ್ವಾನ್ ಸುರೇಂದ್ರ ಆಚಾರ್ಯ ಕಾಸರಗೋಡು, ಕೀಬೋರ್ಡ್ ನಲ್ಲಿ ವಿದ್ವಾನ್ ಅಮ್ಮು ಮಾಸ್ಟರ್ ಕಾಸರಗೋಡು, ರಿದಂ ಪ್ಯಾಡ್ ನಲ್ಲಿ ವಿದ್ವಾನ್ ಸುಹಾಸ್ ಹೆಬ್ಬಾರ್ ಪುತ್ತೂರು.

ಕಾರ್ಯಕ್ರಮ ನಿರೂಪಕರಾಗಿ ಪದ್ಮರಾಜ್ ಚಾರ್ವಾಕ ಸಹಕರಿಸಲಿದ್ದಾರೆ ಎಂದು ಸಂಗೀತ ಗುರುಗಳಾದ ಸವಿತಾ ಕೋಡಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ವರ್ಷ ಸಂಸ್ಥೆಯ ದಶಮಾನೋತ್ಸವ ನಡೆಯಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *