Sat. Apr 19th, 2025

Belagavi: ವಿವಾಹಿತ ಮಹಿಳೆಯ ಸೀರೆ ಬಿಚ್ಚಿ ಮಾರಣಾಂತಿಕ ಹಲ್ಲೆ ಮಾಡಿದ ಪಕ್ಕದ ಮನೆಯವರು- ಕಾರಣ ಏನು?

ಬೆಳಗಾವಿ:(ನ.16) ವಿವಾಹಿತೆ ಮಹಿಳೆ ಮತ್ತು ಆಕೆಯ ತಾಯಿಯ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಪ್ರಕರಣವೊಂದು ವಡ್ಡರವಾಡಿಯಲ್ಲಿ ಇತ್ತೀಚೆಗೆ ನಡೆದಿದೆ.

ಇದನ್ನೂ ಓದಿ: 🟠ಬೆಳ್ತಂಗಡಿ: ಮನ್ ಶರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ದಯಾ ವಿಶೇಷ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ

ಗಂಡನ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದ ಕಾರಣದಿಂದ ವಿವಾಹಿತ ಮನೆಯಲ್ಲಿ ತನ್ನ ತಾಯಿ ಮನೆಯಲ್ಲಿ ವಾಸವಿದ್ದಿದ್ದು, ಈಕೆಯ ಮೇಲೆ ಪಕ್ಕದ ಮನೆಯವರು ಬಂದು ದಾಳಿ ಮಾಡಿ, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಈ ಕುರಿತು ಹಲ್ಲೆಗೆ ಒಳಗಾದ ಮಹಿಳೆಯು ನಾಲ್ವರ ವಿರುದ್ಧ ಮಾಳಮಾರುತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಹಾರಾಷ್ಟ್ರದ ಯುವಕನ ಜೊತೆ ಈ ಮಹಿಳೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಇದ್ದಾರೆ. ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದ ಕಾರಣ ತನ್ನ ತಾಯಿ ಮನೆಯಲ್ಲಿದ್ದಳು.

ಪಕ್ಕದ ಮನೆಯವರು ಈ ಮಹಿಳೆಗೆ ಅವಾಚ್ಯ ಶಬ್ದಗಳ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿರುವುದಾಗಿಯೂ, ಸೋಮವಾರ (ನ.11) ಸಂಜೆ ನಮ್ಮ ಮನೆಗೆ ಬಂದು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *