Thu. Dec 5th, 2024

ಮರಳಿ ಮಾತೃ ಧರ್ಮಕ್ಕೆ…!!


ಪುತ್ತೂರು (ಜೂನ್ 22) : ಪುತ್ತೂರು ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ  ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ವನ್ನು ನಡೆಸಲಾಯಿತು. 
ಈ ಸಂದರ್ಭದಲ್ಲಿ 20 ವರ್ಷಗಳಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂದಿದ್ದ  ಏಳು ಕುಟುಂಬದ 15 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ  ಕರೆ ತರಲಾಯಿತು. 
ಮರಳಿ ಬಂದ ಕುಟುಂಬಗಳಿಗೆ, ಬಟ್ಟೆಗಳು, ದಿನಸಿ ಸಾಮಗ್ರಿಗಳು, ವಿವಿಧ ದೇವರುಗಳ ಫೋಟೋಗಳು, ಮತ್ತು ಇತರ ಗೃಹ ಉಪಯೋಗಿ ಸಾಮಗ್ರಿಗಳನ್ನು ವಿತರಿಸಲಾಯಿತು.