Tue. Jan 14th, 2025

Puttur: ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ‍್ಯಾಂಕ್

ಪುತ್ತೂರು: (ಜು.15) ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2 ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೇಶವ ಪ್ರಜ್ವಲ್.ಪಿ 9.38 ಸಿಜಿಪಿಎ ಅಂಕಗಳೊಂದಿಗೆ 3ನೇ ರ‍್ಯಾಂಕ್‌ ಪಡೆದುಕೊಂಡರೆ ಕುಮಾರಿ ಕೆ.ಪಲ್ಲವಿ ಅವರು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 9.33 ಸಿಜಿಪಿಎ ಅಂಕಗಳೊಂದಿಗೆ 5ನೇ ರ್ಯಾಂಕ್ ಪಡೆದಿದ್ದಾರೆ.

ಕೇಶವ ಪ್ರಜ್ವಲ್.ಪಿ ಅವರು ಕುಂಬ್ಳೆಯ ಶ್ರೀಮತಿ ಶ್ರೀವಾಣಿ ಹಾಗೂ ಶ್ರೀ ಉದಯಶಂಕರ ಭಟ್ ಅವರ ಪುತ್ರರಾಗಿದ್ದಾರೆ. ಕುಮಾರಿ ಕೆ. ಪಲ್ಲವಿಯವರು ಬಂಟ್ವಾಳದ ಶ್ರೀ ಕಿಶೋರ್ ಕುಮಾರ್ ಹಾಗೂ ಶ್ರೀಮತಿ ಕೆ ಚಂದ್ರಿಕಾ ಅವರ ಪುತ್ರಿಯಾಗಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ, ಮುಖ್ಯಸ್ಥರು ಹಾಗೂ ಶಿಕ್ಷಕರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *