Tue. Jul 1st, 2025

ಬಂಟ್ವಾಳ:‌ ಬೈಕ್ ಗೆ ಕೆ ಎಸ್ ಆರ್‌ ಟಿ ಸಿ ಬಸ್ ಡಿಕ್ಕಿ – ಸವಾರ ಮೃತ್ಯು.!

ಬಂಟ್ವಾಳ :‌(ಜು.8) ಬೈಕ್ ಒಂದಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಕಾರಣ ಸವಾರ ಸ್ಥಳ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಬಂಟ್ವಾಳ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಬೆಂಜನಪದವು ನಿವಾಸಿ ನಯನ್ ಕುಮಾರ್ (22) ಮೃತಪಟ್ಟ ಯುವಕನಾಗಿದ್ದಾನೆ.

ಕಡೆಗೋಳಿ ಭಾಗದಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭ ಕೆ ಎಸ್ ಆರ್‌ಟಿಸಿ ಬಸ್ ದ್ವಿಚಕ್ರ ವಾಹನ‌ಕ್ಕೆ ಢಿಕ್ಕಿ ಹೊಡೆದಿದೆ . ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *