Sat. Dec 14th, 2024

Subramanya: ನಾಗರ ಹಾವಿನ ಮರಿಯನ್ನು ರಕ್ಷಿಸಿದ ಸ್ನೇಕ್ ಮಾಧವ

ಸುಬ್ರಮಣ್ಯ (ಜು.12): ಕುಕ್ಕೆ ಸುಬ್ರಹ್ಮಣ್ಯ ಪೇಟೆಯ ಬೈಪಾಸ್ ರಸ್ತೆಯಲ್ಲಿ ನಾಗರಹಾವಿನ ಮರಿಯೊಂದು ನಿಧಾನಕ್ಕೆ ಬರುತ್ತಿರುವುದನ್ನು ಕಂಡ, ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದವರು ಹಾಗೂ ಆಟೋ ರಿಕ್ಷಾದವರು ಗಮನಿಸಿ ಕೂಡಲೇ ಹಾವು ಹಿಡಿಯಲು ತಜ್ಞರಾದ ಆಟೋ ಚಾಲಕ ಸ್ನೇಕ್ ಮಾಧವರನ್ನು ಕರೆಸಿದರು.

ಇದನ್ನೂ ಓದಿ: https://uplustv.com/2024/07/12/bengaluru-ರಾಹುಲ್-ಗಾಂಧಿ-ವಿರುದ್ಧ-ಅವಹೇಳನಕಾರಿಯಾಗಿ-ನಾಲಿಗೆ-ಹರಿಬಿಟ್ಟ-ಶಾಸಕ-ಭರತ್-ಶೆಟ್ಟಿ-ಇನಾಯತ್-ಅಲಿ/

ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಮಾಧವರು ಹಾವಿನ ಮರಿಯನ್ನು ಪಕ್ಕಕ್ಕೆ ತಂದು, ಅದರ ಹೊರ ಭಾಗದಲ್ಲಿ ಆದ ಸಣ್ಣಪುಟ್ಟ ಗಾಯಕ್ಕೆ ಮುಲಾಂ ಹಚ್ಚಿ ಅದನ್ನು ಸಂರಕ್ಷಿಸಿದ್ದಾರೆ.

ಮಾಧವರ ಈ ದೇವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು