Wed. Dec 4th, 2024

Kukke Subrahmanya: Dead body of elephant found floating in Kumaradhara river

ಸುಬ್ರಹ್ಮಣ್ಯ :(ಜು.16) ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ತಡರಾತ್ರಿ 1: 30 ಕ್ಕೆ ವರದಿಯಾಗಿದೆ.

ನಿರಂತರ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಮಟ್ಟವನ್ನು ವೀಕ್ಷಣೆಗೆ ಸೋಮವಾರ ತಡ ರಾತ್ರಿ ಮನ್ಮಥ ಬಟ್ಟೋಡಿ

ಇದನ್ನೂ ಓದಿ:https://uplustv.com/2024/07/15/ujire-bharat-rice-rice-sale-

ಮತ್ತಿತರರು ತೆರಳಿದ್ದ ವೇಳೆ ನೆರೆ ನೀರಿನಲ್ಲಿ ತೇಲಿಬರುತ್ತಿರುವುದು ಕಂಡುಬಂದಿದ್ದು,

ಸೂಕ್ಷ್ಮವಾಗಿ ಗಮನಿಸಿದಾಗ ಆನೆ ಮೃತದೇಹ ಎಂಬುದು ಗೊತ್ತಾಗಿದೆ.

ಆನೆ ಕೆಲದಿನಗಳ ಹಿಂದೆಯೇ ಎಲ್ಲೋ ಸತ್ತು ಈ ಭಾಗಕ್ಕೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ.

ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *