ಮುಂಬೈ:(ಜು.17) ಸುಧಾ ಮೂರ್ತಿ ಅವರು ತಮ್ಮ ಸರಳತೆ ಮತ್ತು ಸಮಾಜ ಸೇವೆಯಿಂದಲೇ ಹೆಸರು ಗಳಿಸಿದವರು.
ಇದನ್ನೂ ಓದಿ: https://uplustv.com/2024/07/17/balehonnur-the-wheels-of-the-bus-fell-
ಇತ್ತೀಚೆಗೆ ನಡೆದ ಮುಖೇಶ್ ಅಂಬಾನಿಯವರ ಮಗನ ಮದುವೆ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಭಾಗಿಯಾಗಿದ್ದು, ಮತ್ತೊಮ್ಮೆ ತನ್ನ ಸರಳತೆಯಿಂದಲೇ ಜನರ ಮನಸ್ಸು ಗೆದ್ದಿದ್ದಾರೆ.
ಚಿನ್ನ, ವಜ್ರ, ಮುತ್ತಿನಿಂದ ವಿನ್ಯಾಸಗೊಳಿಸಿದ ಆಭರಣಗಳಲ್ಲಿ ಮಿಂಚಿದ್ದ ಸೆಲೆಬ್ರೆಟಿಗಳ ಮಧ್ಯೆ ಸುಧಾಮೂರ್ತಿ ಅವರು ಕೊರಳಲ್ಲಿ ಮಂಗಳಸೂತ್ರ ಮಾತ್ರ ತೊಟ್ಟು ಬಂದಿದ್ದಾರೆ.
37 ಸಾವಿರ ಕೋಟಿ ರೂ.ಗಳ ಒಡತಿಯಾದರೂ ಸಿಂಪಲ್ ಆಗಿ ಅಂಬಾನಿ ಮನೆಯ ಮದುವೆಯಲ್ಲಿ ಭಾಗಿಯಾಗಿರುವುದು ಆಕರ್ಷಣೆಗೆ ಕಾರಣವಾಗಿದೆ.
ನಟ ಮಹೇಶ್ ಬಾಬು ಅವರ ಪತ್ನಿ, ನಮ್ರತಾ ಶಿರೋಡ್ಕರ್ ಸುಧಾಮೂರ್ತಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.