Sat. Dec 7th, 2024

ಮೇಷ ರಾಶಿ: ಹೊಸ ಉತ್ಸಾಹವು ನಿಮ್ಮ ಕೆಲಸಗಳಿಗೆ ಪೂರಕವಾಗಿ ಇರಲಿದೆ. ಇಂದು ಬೋಧಕವರ್ಗದವರಲ್ಲಿ ಹೆಚ್ಚು ಒತ್ತಡ ಕಾಣಿಸುವುದು. ಹಣದ ಹರಿವು ತಕ್ಕಮಟ್ಟಿಗೆ ಇರಲಿದೆ. ಕೆಟ್ಟ ಆರೋಗ್ಯವನ್ನು ಸರಿ ಮಾಡಿಕೊಳ್ಳಿ.

ವೃಷಭ ರಾಶಿ: ಇಂದು ಸಣ್ಣ ಪುಟ್ಟ ನೋವುಗಳೂ ನಗುವಿನ ಜೊತೆ ಕರಗಲಿ. ಸ್ನೇಹಿತರ ಜೊತೆ ಸುತ್ತಾಡಿ ಹಣವನ್ನು ಖರ್ಚು ಮಾಡುವಿರಿ. ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳು ವ್ಯತ್ಯಾಸವಾಗುವುದು.

ಮಿಥುನ ರಾಶಿ: ಇಂದು ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಇಂದಿನ ಕೆಲಸವನ್ನು ಪೂರೈಸಲು ಅನಾರೋಗ್ಯವು ಅಡ್ಡವಾಗಬಹುದು.

ಕರ್ಕಾಟಕ ರಾಶಿ: ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ಹಳೆಯ ನೋವನ್ನು ಸ್ಮರಿಸಿಕೊಳ್ಳುವುದು ಬೇಡ. ಆದಾಯದ ಮೂಲವನ್ನು ಹುಡುಕಿಕೊಳ್ಳುವಿರಿ. ಮನೆಗೆ ಹಣದ ಸಹಾಯ ಮಾಡಬೇಕಾದ ಸ್ಥಿತಿ ಬರಬಹುದು. ನಿಮ್ಮವರ ಗೌಪ್ಯತೆಯನ್ನು ಕಾಪಾಡಿಕೊಳ್ಳಿ.

ಸಿಂಹ ರಾಶಿ: ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚು ಅಥವಾ ವಾಹನದ ದುರಸ್ತಿ ಕಾರ್ಯವನ್ನು ಮಾಡಬೇಕಾಗಬಹುದು. ಸಂಗಾತಿಯ ಆಸೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಮೊದಲೇ ಯೋಚಿಸಿ.

ಕನ್ಯಾ ರಾಶಿ: ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಹಣದ ಸಮಸ್ಯೆಗಳು ತಾನಾಗಿಯೇ ನಿವಾರಣೆಯಾಗುವುದು.

ತುಲಾ ರಾಶಿ: ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿರುವುದು.‌ ಹಳೆಯ ಸ್ನೇಹಿತರು ನಿಮ್ಮನ್ನು ಭೇಟಿಯಾಗಬಹುದು.

ವೃಶ್ಚಿಕ ರಾಶಿ: ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ಇನ್ನೊಬ್ಬರ ಪ್ರಭಾವದ ಮೇಲೆ ನೀವು ಕೆಲಸವನ್ನು ಪಡೆಯುವಿರಿ. ಆಪ್ತರಿಂದ ಅನಿರೀಕ್ಷಿತ ಪಾರಿತೋಷಕಗಳು ಸಿಗಬಹುದು.

ಧನು ರಾಶಿ: ಇಂದು ನಿಮಗೆ ಸಾಲ ಕೊಡಲಿಕ್ಕಾಗಿ ಒಂದರಮೇಲೆ‌ ಒಂದರಂತೆ ಕರೆಗಳು ಬರಬಹುದು. ಸಂತೋಷವಾಗಿರಲು ಎಲ್ಲ ಯೋಜನೆಗಳನ್ನು ಸಿದ್ಧಪಡಿಸಿದರೂ ಅದು ವ್ಯತ್ಯಾಸ ಆಗಬಹುದು ಅಥವಾ ಇನ್ನೇನೋ ಆಗಬಹುದು. ಇಂದಿನ ಸಿಟ್ಟು ನಿಮ್ಮ ಜೀವನಕ್ಕೆ ಬೇಡವಾಗಿರುವುದು. ಅದು ಬೇರೆ ರೂಪವನ್ನು ಪಡೆಯಬಹುದು.

ಮಕರ ರಾಶಿ: ಕಿಂಚಿತ್ತಾದರೂ ನಿಮ್ಮಿಂದ ಸಹಕಾರವಾದರೆ ನಿಮಗೆ ಸಮಾಧಾನ ಸಿಗಲಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಸಾಮಾಜಿಕ ಕಾರ್ಯಕ್ಕೆ ಹಲವರಿಂದ ಒತ್ತಡ ಸಿಗಬಹುದು. ಹಣವು ವ್ಯಯವಾಗುವ ಸಾಧ್ಯತೆ ಇದೆ‌.

ಕುಂಭ ರಾಶಿ: ನಿಮ್ಮ ಇಂದಿನ‌ ಯೋಜನೆಗಳು ತಲೆಕೆಳಗಾಗುವುದು. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು.ಉದ್ಯೋಗವನ್ನು ಬದಲಿಸುವುದು ಅನಿವಾರ್ಯವಾಗಿ ಬರಬಹುದು.

ಮೀನ ರಾಶಿ: ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆಪ್ತರ ಜೊತೆ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುವಿರಿ. ಅಪರಿಚತವಾದ ಹುದ್ದೆಗಳನ್ನು ಅನಿವಾರ್ಯವಾಗಿ ಅಲಂಕರಿಸಬೇಕಾದೀತು.

Leave a Reply

Your email address will not be published. Required fields are marked *