
ಬೆಳ್ತಂಗಡಿ:(ಜು.18) ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಮಳೆಯಿಂದಾಗಿ ಅಪಾಯಗಳು ಸಂಭವಿಸುತ್ತಿದೆ. ಗುಡ್ಡ ಕುಸಿತದ ಪ್ರಕರಣಗಳು, ಮನೆಯ ಗೋಡೆ ಕುಸಿತ , ಹೀಗೆ ವಿಪರೀತ ತೊಂದರೆಗಳು ಉಂಟಾಗುತ್ತಿದೆ.

ಇದನ್ನೂ ಓದಿ: https://uplustv.com/2024/07/18/ujire-bike-accident-ನಡೆದುಕೊಂಡು-ಹೋಗುತ್ತಿದ್ದ-ಪಾದಚಾರಿಗೆ

ಮಳೆ ನಿರಂತರ ಸುರಿಯುತ್ತಿರುವುದರಿಂದ, ಲಾಯಿಲದಲ್ಲಿ ಮನೆಯೊಂದರ ಹಿಂಬದಿಯ ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.

ಲಾಯಿಲ ಪುಳಿತ್ತಡಿ ನಿವಾಸಿ ಸಂಜೀವ ಎಂಬುವವರ ಮನೆಯ ಹಿಂಬದಿಯ ಗೋಡೆ ಕುಸಿತದ ಕಾರಣದಿಂದ, ಮನೆ ಕುಸಿಯುವ ಭೀತಿ ಉಂಟಾಗಿದೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
