ಉತ್ತರಕನ್ನಡ:(ಜು.18) ಉತ್ತರ ಕನ್ನಡದ ಜಿಲ್ಲೆಯಲ್ಲಿ ಸುರಿಯುತ್ತಿರುವ ರಣಭೀಕರ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡು ,

ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ಮಣ್ಣಿನಡಿಗೆ ಸಿಲುಕಿಗೊಂಡಿತ್ತು.

ಇನ್ನು ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತದ ರಭಸಕ್ಕೆ ಪ್ರಪಾತಕ್ಕೆ ಬಿದ್ದು,

ಪಕ್ಕದಲ್ಲಿ ಹರಿಯುತ್ತಿದ್ದ ನದಿಗೆ ಉರುಳಿ ಬಿದ್ದಿತ್ತು.

ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ನಾಪತ್ತೆಯಾಗಿದ್ದರು. ಟ್ಯಾಂಕರ್ ಚಾಲಕನ ಮೃತ ದೇಹ ಅಂಕೋಲಾ ಬಳಿಯ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.

ಮೃತದೇಹವನ್ನು ನದಿಯಿಂದ ಮೇಲೆತ್ತಲಾಗಿದೆ. ಗುಡ್ಡ ಕುಸಿತ ಪ್ರಕರಣದಲ್ಲಿ ಇದುವರೆಗೂ ಆರು ಜನರ ಮೃತ ದೇಹ ಪತ್ತೆಯಾಗಿದೆ.

ಟ್ಯಾಂಕರ್ ಚಾಲಕ ತಮಿಳುನಾಡು ಮೂಲದವನು ಎಂಬ ಶಂಕೆ ವ್ಯಕ್ತವಾಗಿದೆ.