

ಬೆಳ್ತಂಗಡಿ :(ಜು.22) ಇಂದಬೆಟ್ಟು ಗ್ರಾಮದ ಬಂಗಾಡಿ ನಿವಾಸಿ ಬಾಬು ಮಡಿವಾಳ ಎಂಬವರ ಪತ್ನಿ ಮೋಹಿನಿ (60ವ) ಎಂಬವರು ತೋಡಿಗೆ ಬಿದ್ದು ನೀರಲ್ಲಿ ಕೊಚ್ಚಿ ಹೋದ ಘಟನೆ ಭಾನುವಾರ ನಡೆದಿದೆ.
ಇದನ್ನೂ ಓದಿ: https://uplustv.com/2024/07/22/rekhya-ಸಿಡಿಲು-ಬಡಿದು-ಹಾನಿಯಾದ-ಕುರುಡೇಲು-/


ಭಾನುವಾರ ಸಂಜೆ ಕೂಲಿ ಕೆಲಸ ಬಿಟ್ಟು ಅಂಗಡಿಗೆ ಹೋದವರು ಮನೆಗೆ ಬಾರದಿದ್ದಾಗ ಮನೆಯವರು ಹುಡುಕಾಡಿದ್ದು ಪತ್ತೆಯಾಗಿರಲಿಲ್ಲ.

ಸೋಮವಾರ ಬಂಗಾಡಿ ಸಹಸ್ರ ನಾಗಬನ ದೇವಸ್ಥಾನ ಬಳಿ ಮೃತದೇಹ ಪತ್ತೆಯಾಗಿದೆ.

ಮೋಹಿನಿ ಅವರು ಅಂಗಡಿಗೆ ಹೋಗುವ ದಾರಿ ಮಧ್ಯೆ ಬೆದ್ರಬೆಟ್ಟು ಬಳಿ ತೋಡು ದಾಟಿ ಹೋಗಬೇಕಾಗಿದ್ದು, ತೋಡು ದಾಟುವಾಗ ನೀರಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ.

ತೋಡು ದಾಟುವಾಗ ನೀರಿಗೆ ಬಿದ್ದು ಮೃತಪಟ್ಟಿದ್ದು ಸುಮಾರು ಎರಡು ಕಿ.ಮೀ ದೂರದವರೆಗೆ ಕೊಚ್ಚಿಕೊಂಡು ಹೋಗಿ
ಸಹಸ್ರ ನಾಗಬನ ಬಳಿ ಮೃತದೇಹ ಸಿಲುಕಿಕೊಂಡಿತ್ತು.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
