Sat. Dec 14th, 2024

Daily Horoscope: ಈ ರಾಶಿಯವರಿಗೆ ಸಿಗಲಿದೆ ವೃತ್ತಿ ಜೀವನದಲ್ಲಿ ಯಶಸ್ಸು

ಮೇಷ ರಾಶಿ: ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ನಿಮ್ಮ ಪಾಲಿನದ್ದು ನೀವು ಇಂದು ಪಡೆದುಕೊಳ್ಳುವಿರಿ. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ನಿಮಗೆ ಇಂದು ಕುಟುಂಬಕ್ಕಿಂತಲೂ ಕಾರ್ಯವೇ ಮುಖ್ಯವಾಗಲಿದೆ. ಬೇಡ ಆಲೋಚನೆಯನ್ನು ಬಿಡುವುದು ಸೂಕ್ತ.ವೃಷಭ ರಾಶಿ: ದಿನದ ಆರಂಭದಲ್ಲಿ ಉತ್ಸಾಹವಿರದು. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ನೂತನ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಪುಣ್ಯಸ್ಥಳದಿಂದ ನೆಮ್ಮದಿ ಸಿಗುವುದು.

ಮಿಥುನ ರಾಶಿ: ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ಅಧಿಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು.

ಕಟಕ ರಾಶಿ: ಇಂದು ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಒತ್ತಡವಿರುವುದು. ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ವಾಹನದಿಂದ ನಿಮಗೆ ತೊಂದರೆಗಳು ಆಗಬಹುದು‌. ಸ್ತ್ರೀಯರಿಗೆ ಹೆಚ್ಚು ಅನುಕೂಲಕರವಾಗಲಿದೆ‌.

ಸಿಂಹ ರಾಶಿ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ಯಾರನ್ನೂ ಎದುರುಹಾಕಿಕೊಳ್ಳುವುದು ಬೇಡ. ಮನಸ್ಸನ್ನು ಯಾವುದೋ ಬೇಡದ ವಿಷಯಗಳ ಆಲೋಚನೆಗೆ ಬಿಡುವಿರಿ.

ಕನ್ಯಾ ರಾಶಿ: ಇಂದು ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ನಿಮ್ಮ ಬೌದ್ಧಿಕ ಸಾಮರ್ಥ್ಯದ ಬಗ್ಗೆ ನಿಮಗೇ ಆಶ್ಚರ್ಯವಾಗಬಹುದು. ಕ್ರೀಡಾ ಮನೋಭಾವವು ಇರಲಿದೆ.

ತುಲಾ ರಾಶಿ: ಹಳೆಯ ವಸ್ತುಗಳನ್ನೇ ಸರಿ ಮಾಡಿಕೊಳ್ಳುವಿರಿ. ಹೊರಗೆ ಸುತ್ತಟ ಮಾಡಿ ದೇಹ ಹಾಗೂ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ಸಂಗಾತಿಯ ಚಿಂತನೆಗಳನ್ನು ನೀವು ಗೌರವಿಸುವಿರಿ. ಜೀವನವನ್ನು ರೂಪಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬಹುದು. ಸುಳ್ಳು ಸುದ್ದಿಗಳನ್ನು ನಂಬಬೇಕಾಗುವುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಹಣವನ್ನು ಸಂಪಾದಿಸುವ ಛಲವಿದ್ದರೂ ಮಾರ್ಗವು ಶುದ್ಧವಾಗಿರಲಿ. ನೀವು ಮಾಡುವ ಕೆಲಸದ ಮೇಲೆ ಪೂರ್ಣ ವಿಶ್ವಾಸವಿರಲಿ.

ಧನು ರಾಶಿ: ಇಂದು ನಿಮ್ಮ ಹೊಸ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು. ಆದಷ್ಟು ನಿಮ್ಮ ನಿಯಂತ್ರಣವನ್ನು ಬಿಟ್ಟು ಕದಲುವುದು ಬೇಡ. ಧೈರ್ಯದಿಂದ ಮುನ್ನಡೆಯಲು ಅನುಭವಿಗಳ ಸಲಹೆಯು ಅವಶ್ಯಕ. ಇಂದು ನೀವು ಒತ್ತಡದಲ್ಲಿಯೇ ಇಂದಿನ ಕೆಲಸವನ್ನು ಮಾಡುವಿರಿ.

ಮಕರ ರಾಶಿ: ಇಂದು ನೀವು ಆಪ್ತರನ್ನು ಅಪಹಾಸ್ಯ ಮಾಡಲು ಹೋಗಿ ನೀವೇ ಹಾಸ್ಯದಲ್ಲಿ ಸಿಕ್ಕಿಬೀಳುವಿರಿ‌ ಬಹಳ ಒತ್ತಡದಲ್ಲಿ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ದೇಹವು ಹೆಚ್ಚು ವಿಶ್ರಾಂತಿಯನ್ನು ಕೇಳಬಹುದು. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಮನಸ್ಸಿಗೆ ಏನೋ ಒಂದು ಹೊಸತು ಬೇಕು ಅನ್ನಿಸಬಹುದು.

ಕುಂಭ ರಾಶಿ: ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಮುನ್ನಡೆಯಿರಿ. ಪ್ರತಿಕೂಲ ಸ್ಥಿತಿಯನ್ನು ದೈವಾನುಗ್ರಹದಿಂದ ಪಾರಾಗಲು ಸಾಧ್ಯ. ನೂತನ ಗೃಹನಿರ್ಮಾಣವನ್ನು ಮಾಡುವಿರಿ. ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಹುಡುಕುವಿರಿ.

ಮೀನ ರಾಶಿ: ಇಂದು ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಸಣ್ಣದನ್ನು ದೊಡ್ಡದಾಗಿ ಮಾಡಿಕೊಳ್ಳಲು ಹೋಗದೇ ಅಲ್ಲಿಯೇ ಮುಕ್ತಾಯಗೊಳಿಸಿ. ನಿಮ್ಮನ್ನು ಅಳೆಯಲು ಆರಂಭಿಸುವರು. ಸುತ್ತಲೂ ನಿಮ್ಮ‌ ಕಣ್ಣಿರಲಿ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಇರಲಿದೆ. ಹಣಕಾಸಿನ ಸಮಸ್ಯೆಯನ್ನು ಅತಿಯಾಗಿ‌ ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು