



ಮಂಗಳೂರು:(ಜು.22) ಡಾ. ಪವಿತ್ರ ಜಿ. ಪಿ ಯವರ ಮಾರ್ಗದರ್ಶನದಲ್ಲಿ ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ

ಇದನ್ನೂ ಓದಿ: https://uplustv.com/2024/07/22/mangalore-ಕಂಬಳಕ್ಕೆ-ಸಿಗದ

” Development of Nanostructured Multilayer coating by electro position using single bath techniques and their corrosion studies ”

ಎಂಬ ವಿಷಯದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಇವರು ಬಜಪೆ ತಾಂಗಡಿ ದಿ| ದೇಜಪ್ಪ ಪೂಜಾರಿ ಹಾಗೂ ಮಾಲತಿ ಡಿ ಪೂಜಾರಿಯವರ ಪುತ್ರಿಯಾಗಿದ್ದು, ರಮ್ಯ ಡಿ ಪೂಜಾರಿಯವರ ಸಹೋದರಿ ಯಾಗಿರುತ್ತಾರೆ.

ಪ್ರಸ್ತುತ ದುಬೈಯಲ್ಲಿ ಉದ್ಯೋಗಿಯಾಗಿರುವ ಶ್ರಿ ಹರ್ಷ ಪೂಜಾರಿ ಯವರ ಧರ್ಮಪತ್ನಿಯಾಗಿದ್ದು, ದಂಬೆಲ್ ನ ಜಯರಾಮ್ ಕರ್ಕೇರ ಹಾಗೂ ವತ್ಸಲ ದಂಪತಿಯ ಸೊಸೆಯಾಗಿರುತ್ತಾರೆ.