Tue. Mar 25th, 2025

Shiruru hill collapse: ಲಾರಿ ಚಾಲಕ ಅರ್ಜುನ್ ಕುಟುಂಬದಿಂದ ಹೆಬಿಯಾಸ್ ಕಾರ್ಪಸ್ ಹಾಕಲು ತಯಾರಿ

ಶಿರೂರು:(ಜು.24) ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಲಾರಿ, ಶಿರೂರು ನಲ್ಲಿ ನಿಂತ ಮಾಹಿತಿ ಲಭ್ಯವಾಗಿದೆ. ಜೋಯಿಡಾದ ರಾಮನಗರದಿಂದ ಜುಲೈ 15 ರ ಸಂಜೆ 4.30 ಕ್ಕೆ ಹೊರಟಿದ್ದ ಭಾರತ್ ಬೆಂಜ್ ಲಾರಿ ಚಾಲಕ ಅರ್ಜುನ್ ಬೆಳಿಗ್ಗೆ 3.47 ಕ್ಕೆ ಶಿರೂರು ಬಳಿ ಬಂದಿದ್ದರು ಎನ್ನಲಾಗಿದೆ.

ಬೆಳಿಗ್ಗೆ ನಿದ್ದೆಗೆ ಜಾರಿದ್ದ ಅರ್ಜುನ್. ಮಧ್ಯ ರಾತ್ರಿ 2.45 ಕ್ಕೆ ಇನ್ನೊಂದು ಲಾರಿ ಚಾಲಕನಿಗೆ ಕರೆ ಮಾಡಿ ನನಗೆ ನಿದ್ದೆ ಬರುತ್ತಿದೆ ಎಂದು ಹೇಳಿದ್ದರು. ಬೆಳಿಗ್ಗೆ 8.45 ಕ್ಕೆ ಗುಡ್ಡ ಕುಸಿದಿದ್ದು ಮಣ್ಣಿನ ಜೊತೆ ಲಾರಿ ನದಿಗೆ ಬಿದ್ದಿದೆ.

ಅರ್ಜುನ್ ಮೊಬೈಲ್ ನೆಟ್ ವರ್ಕ್ 8.45 ರವೇಳೆಗೆ ನೆಟ್ ವರ್ಕ್ ಕಳೆದುಕೊಂಡಿತ್ತು. ಅರ್ಜುನ್ ಲಾರಿ ಅಂಕೋಲಾ ಮೂಲಕ ಹೋದ ಸಿಸಿಟಿವಿ ದೃಶ್ಯ ಸೆರೆಯಾಗಿದೆ.

ಈ ನಡುವೆ ಅರ್ಜುನ್ ಇನ್ನೂ ಸಿಕ್ಕಿಲ್ಲ ಎಂದು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಲಾಗಿದೆ. ಮಲಯಾಳಿ ಎನ್ನುವ ವ್ಯಕ್ತಿಯಿಂದ ಪಿಐಎಲ್ ಹಾಕಲಾಗಿದ್ದು, ಇದೀಗ ಅರ್ಜುನ್ ಕುಟುಂಬದಿಂದ ಹೆಬಿಯಾಸ್ ಕಾರ್ಪಸ್ ಹಾಕಲು ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: https://uplustv.com/2024/07/24/puttur-ಟ್ಯಾಂಕರ್-ದ್ವಿಚಕ್ರ-ನಡುವೆ-ಭೀಕರ-ಅಪಘಾತ-ವಿಕಲಚೇತನ

ಇದರ ನಡುವೆ ಲಾರಿ ಶಿರೂರಿಯನಲ್ಲಿಯೇ ಇದೆ ಎಂದು ಬಹುತೇಕ ಸಿಸಿಟಿವಿ ದೃಶ್ಯಗಳು ಖಚಿತ ಪಡಿಸಿವೆ.

Leave a Reply

Your email address will not be published. Required fields are marked *