ಉಜಿರೆ:(ಜು.26) ಉಜಿರೆ ಗ್ರಾಮದ ಮುಂಡತ್ತೋಡಿ ಉಮೇಶ ಮುಗೇರಾ ಎಂಬುವವರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿರುವ ಫಟನೆ ನಡೆದಿದೆ.





ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಮನೆ ಸಂಪೂರ್ಣ ನೆಲಸಮವಾಗಿದೆ.


ಮನೆಯಲ್ಲಿ ಉಮೇಶ್ ಮುಗೇರಾ ವಾಸಿಸುತ್ತಿದ್ದು ಬೆಳ್ಳಂ ಬೆಳಗ್ಗೆ ಉಂಟಾದ ಶಬ್ದದಿಂದ ಎಚ್ಚರಗೊಂಡಿದ್ದಾರೆ.

ಸ್ಥಳಕ್ಕೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್, ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಗುರು ಪ್ರಸಾದ್ ಕೋಟ್ಯಾನ್, ಲಲಿತ, ಮಂಜುನಾಥ್, ಸ್ಥಳಕ್ಕೆ ಭೇಟಿ ನೀಡಿ ಆಕಸ್ಮಿಕ ಪರಿಹಾರವಾಗಿ ರೂ 10,000 ಮಂಜೂರು ಮಾಡಲಾಯಿತು.
