
Olympics: (ಜು.27) ಪ್ಯಾರಿಸ್‌ನ ಒಲಿಂಪಿಕ್ಸ್ ನಡೆಯಲಿರುವ ಪುರುಷರ ಮೊದಲ ಡಬಲ್ ಸುತ್ತಿನಲ್ಲಿ ಭಾರತದ ಶ್ರೀರಾಮ್ ಬಾಲಾಜಿ ರೋಹನ್ ಬೋಪಣ್ಣ ಫ್ರಾನ್ಸ್ನ ಫ್ಯಾಬಿಯನ್ ರೆಬೌಲ್ ಎಡ್ವರ್ಡ್ ರೋಜರ್ ಜೋಡಿಯನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: https://uplustv.com/2024/07/27/bengaluru-ಮಟನ್-ಜೊತೆ-ನಾಯಿ-ಮಾಂಸ-ಆಮದು-ಅಬ್ದುಲ್-ರಜಾಕ್-ಬದಲು

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಗೆ ರೋಲ್ಯಾಂಡ್ ಗ್ಯಾರೋಸ್‌ನ ಕ್ಲೇ ಕೋರ್ಟ್ನಲ್ಲಿ ಪಂದ್ಯ ನಡೆಯಲಿದೆ. ಪ್ಯಾರಿಸ್ ಒಲಂಪಿಕ್‌ನಲ್ಲಿ ಭಾರತದ ಟೆನಿಸ್ ಆಟಗಾರರು ಅಭಿಯಾನ ನಡೆಸಲಿದ್ದಾರೆ.


ಈ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಶ್ರೀಬಾಲಾಜಿಯವರು ಕಣಕ್ಕಿಳಿಯಲಿದ್ದಾರೆ. ಪಂದ್ಯಕ್ಕೆ ರೋಹನ್ ಬೋಪಣ್ಣ ನೇರ ಅರ್ಹತೆ ಪಡೆದುದಲ್ಲದೆ,ಇವರ ಜೋಡಿಯಾಗಿ ಕೊಯಮತ್ತೂರು ಮೂಲದ ಶ್ರೀರಾಮ್ ರನ್ನು ಆಯ್ಕೆ ಮಾಡಿದ್ದಾರೆ.

ರೋಹನ್ ಬೋಪಣ್ಣ ಶ್ರೀರಾಮ್ ನವರನ್ನೆ ಆಯ್ಕೆ ಮಾಡಲು ಮೂಲ ಮಾಹಿತಿ ಇಲ್ಲಿದೆ!!

ಮೇ ತಿಂಗಳಲ್ಲೇ ರೋಹನ್ ಬೋಪಣ್ಣ ತಮಿಳುನಾಡಿನ ಆಟಗಾರನೊಂದಿಗೆ ಆಡಲು ನಿರ್ಧರಿಸಿದ್ದರು. ಆದರೆ ಒಲಂಪಿಕ್ಸ್ ಕಟ್ ಆಫ್ ದಿನಾಂಕದ ವೇಳೆ ಶ್ರೀರಾಮ್ ವಿಶ್ವ ಶ್ರೇಯಾಂಕದಲ್ಲಿ ಟಾಪ್ 50 ರಲ್ಲೂ ಕಾಣಿಸಿಕೊಂಡಿರಲಿಲ್ಲ, ಭಾರತದ ಮತ್ತೊಬ್ಬ ಟೆನಿಸ್ ಆಟಗಾರ ಯೂಕಿ ಬಾಬ್ರಿಗಿಂತ ಹಿಂದಿದ್ದರು.

ಶ್ರೀ ಬಾಲಾಜಿಯವರು ಶ್ರೇಯಾಂಕದಲ್ಲಿ 67 ನೇ ಸ್ಥಾನದಲ್ಲಿದ್ದರೆ, ಯೂಕಿ ಬಾಬ್ರಿಯವರು 54ನೇ ಸ್ಥಾನದಲ್ಲಿದ್ದರು. ಆದರು ಇದಿಗ ಶ್ರೀರಾಮ್ ಬಾಲಾಜಿಯವರು ಎಟಿಪಿ ಜೂನಿಯರ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ.

ಇಟಲಿಯ ಸರ್ಡೆಗ್ನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಇವರದ್ದಾಗಿತ್ತು. ಜೊತೆಗೆ ಪೆರುಂಗಿಯಾ ಚಾಲೆಂಜ್‌ನಲ್ಲಿ ಶ್ರೀರಾಮ್ ಬಾಲಾಜಿಯವರು ರನ್ನರ್ ಅಪ್ ಆಗಿದ್ದರು. ಚಾಲೆಂಜರ್‌ನಲ್ಲಿ ಈ ಕಾರಣದಿಂದ ಶ್ರೀರಾಮ್ ಬಾಲಾಜಿ ಜೊತೆ ಕಣಕ್ಕಿಳಿಯಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.
