Gun Weight:(ಜು.28) ಪ್ಯಾರಿಸ್ ಒಲಿಂಪಿಕ್ಸ್ 2024ರ ವೇಳಾ ಪಟ್ಟಿಯು ಜಾರಿಗೊಂಡಿದ್ದು, ಈಗಾಗಲೇ ಜುಲೈ 26 ರಂದು ಪ್ಯಾರಿಸ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭವು ಅಧಿಕೃತವಾಗಿ ಚಾಲನೆಗೊಂಡಿದೆ, 200ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 10,500 ಕ್ರಿಡಾಪಟುಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: https://uplustv.com/2024/07/28/karkala-ಫ್ಲಾಟ್-ನಲ್ಲಿ-ಗ್ಯಾಸ್-ಸಿಲಿಂಡರ್-ಸ್ಫೋಟ
ಅದರಲ್ಲಿ ಭಾರತದ ಕ್ರೀಡೆಗಳಾದ ಬಾಕ್ಸಿಂಗ್, ಕುಸ್ತಿ, ಬಾಡ್ಮಿಂಟನ್, ಜಾವೆಲಿಂಗ್, ಆರ್ಚೆರಿ, ಶೂಟಿಂಗ್, ಹಾಕಿ ಮೊದಲಾದ ಕ್ರೀಡೆಗಳು ನಡೆಯಲಿದ್ದು, ಭಾರತದ ಕೀಡಾ ಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸುವವರು ಯಾರೆಲ್ಲಾ ಎಂದು ನೋಡುವುದಾದರೆ…
ಪ್ಯಾರಿಸ್ ಒಲಂಪಿಕ್‌ನಲ್ಲಿ ಶೂಟಿಂಗ್ ಕ್ರೀಡೆಯು ಜುಲೈ 26ರಿಂದ, ಆಗಸ್ಟ್ 5 ರ ತನಕ ನಡೆಯಲಿದೆ. ಈ ಕ್ರೀಡೆಯಲ್ಲಿ ಪುರುಷರ ವಿಭಾಗ ಸಂದೀಪ್ ಸಿಂಗ್, ಅರ್ಜುನ್ ಬಾಬುಟಾ, ಐಶ್ವರಿ ತೋಮರ್, ಸ್ವಪ್ನಿಲ್ ಕುಸಲೆ, ಸರಬ್ಜೋತ್ ಸಿಂಗ್, ಅರ್ಜುನ್ ಚೀಮಾ, ಅನೀಶ್ ಭನ್ವಾಲ್, ವಿಜಯವೀರ್ ಸಿಂಧು, ಪೃಥ್ವಿರಾಜ್ ತೊಂಡೈಮಾನ್,
ಅನಂತ್‌ಜೀತ್ ಸಿಂಗ್ ಭಾಗವಹಿಸಿದ್ದಾರೆ. ಇನ್ನು ಮಹಿಳೆಯರ ವಿಭಾಗ ನೋಡುವುದಾದರೆ ಎಲವೆನಿಲ್ ವಲರಿವನ್, ರಮಿತಾ, ಸಿಫ್ಟ್ ಕೌರ್ ಸಮ್ರಾ, ಅಂಜುಮ್ ಮೌಡ್ಗಿಲ್, ರಿದಮ್ ಸಾಂಗ್ವಾನ್, ಮನು ಭಾಕರ್, ಇಶಾ ಸಿಂಗ್, ರಾಜೇಶ್ವರಿ ಕುಮಾರಿ, ಶ್ರೇಯಸಿ ಸಿಂಗ್, ಮಹೇಶ್ವರಿ ಚೌಹಾಣ್, ರೈಜಾ ಧಿಲ್ಲೋನ್ ಕಣಕ್ಕಿಳಿದಿದ್ದಾರೆ.
ಪುರುಷರು ಭಾಗವಹಿಸುವ ಶೂಟಿಂಗ್ ಗನ್‌ನ ತೂಕಗಳು ಹೀಗಿವೆ, 10ಮೀ ಇರುವ ಏರ್ ರೈಫಲ್, 25ಮೀ ಕ್ಷಿಪ್ರ ಫೈರ್ ಪಿಸ್ತೂಲ್, ಎರಡು ಪೊಷಿಶನ್ ಇರುವ 50ಮೀ ರೈಫಲ್, 10 ಮೀಟರ್ ಏರ್ ಪಿಸ್ತೂಲ್ ಹಾಗೂ ಸ್ಕೀಟ್‌ಗಳನ್ನು ಒಳಗೊಂಡಿದೆ.
ಅಂತೆಯೇ ಮಹಿಳೆಯರ ಭಾಗದಲ್ಲಿ 10 ಮೀ ಏರ್ ರೈಫಲ್, 25ಮೀ ಪಿಸ್ತೂಲ್, ಎರಡು ಪೊಷಿಶನ್ ಇರುವ 50ಮೀ ರೈಫಲ್, 10 ಮೀಟರ್ ಏರ್ ಪಿಸ್ತೂಲ್, ಸ್ಕೀಟ್‌ಗಳನ್ನು ಒಳಗೊಂಡಿದೆ. 10ಮೀಟರ್ ಏರ್ ರೈಫಲ್‌ನಲ್ಲಿ ಮಹಿಳೆಯರು ಹಾಗೂ ಪುರುಷರು ಒಂದೇ ತಂಡದಲ್ಲಿ ಕಾಣಲಿದ್ದಾರೆ ಹಾಗೂ ಸ್ಕೀಟ್‌ನಲ್ಲಿಯು ಪುರುಷರು ಹಾಗೂ ಮಹಿಳೆಯರ ತಂಡ ಭಾಗವಹಿಸಲಿದೆ.