Sat. Apr 12th, 2025

Mogru: ಕಾಡು ಬೆಳೆಸಲು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ವಿಭಿನ್ನ ಕೆಲಸ, ಏನದು .?

ಮೊಗ್ರು :(ಜು.28) ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಮಹತ್ವಾಕಾಂಕ್ಷಿ ವಾರ್ಷಿಕ ಯೋಜನೆಗಳಲ್ಲಿ ಒಂದಾದ ಗ್ರಾಮ ವಿಕಾಸ.

ಇದನ್ನೂ ಓದಿ: https://uplustv.com/2024/07/28/belthangadi-ಬೈಕ್-ಬೊಲೆರೋ-ನಡುವೆ-ಅಪಘಾತ-ಬಾಲಕಿ-ಮೃತ್ಯು/


ವಿದ್ಯಾವರ್ಧಕ ಸಂಘದ ಸಹ ಸಂಸ್ಥೆಯಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ನೇತೃತ್ವದಲ್ಲಿ ಗ್ರಾಮ ವಿಕಾಸಕ್ಕೆ ಆಯ್ಕೆಯಾದ ಗ್ರಾಮ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮ.


ಕಳೆದ ಒಂದು ವರ್ಷದಿಂದ ಗ್ರಾಮ ವಿಕಾಸ ಸಮಿತಿಯು ಯೋಜನೆಗಳನ್ನು ರೂಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಮಕ್ಕಳನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ.


ಜುಲೈ 26 ರಂದು ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ತಾವೇ ತಯಾರಿಸಿದ “ಸೀಡ್ ಬಾಲ್ ” ಹಾಗೂ ಗಿಡಗಳನ್ನು ಮೊಗ್ರು ಗ್ರಾಮದ ಅಲೆಕ್ಕಿ ಎಂಬಲ್ಲಿ ಅಲ್ಲಲ್ಲಿ ಭೂಮಿಗೆ ಬಿಸಾಡುವ ಕಾರ್ಯವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಜೊತೆಗೆ ಗ್ರಾಮ ವಿಕಾಸ್ ತಂಡದ ಸದಸ್ಯರಾದ ಶಶಿಕಲಾ ಜಿ ಬಾಂಕ್ಯ, ಶಿಕ್ಷಕರಾದ ವಿದ್ಯಾ ಹಾಗೂ ಜ್ಯೋತಿಕಿರಣ್ ಉಪಸ್ಥಿತರಿದ್ದರು. ಅಲೆಕ್ಕಿ ಶ್ರೀರಾಮ ಶಿಶುಮಂದಿರದ ಮಾತಾಜಿ ಯವರು ಹಾಗೂ ಆಡಳಿತ ಸಮಿತಿಯ ಸದಸ್ಯರು ಸಹಕರಿಸಿದರು.

Leave a Reply

Your email address will not be published. Required fields are marked *