Sat. Dec 7th, 2024

Moodbidire: ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆ -ಯುವಕ ದಾರುಣ ಅಂತ್ಯ

ಮೂಡುಬಿದಿರೆ:(ಜು.29) ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ಘಟನೆ ರವಿವಾರ ರಾತ್ರಿ ಕೋಟೆಬಾಗಿಲಿನಲ್ಲಿ ಸಂಭವಿಸಿದೆ.

ಇದನ್ನೂ ಓದಿ; https://uplustv.com/2024/07/29/belthangadi-ಹಿಟ್-ರನ್-ಪ್ರಕರಣದಲ್ಲಿ-ಬಾಲಕಿ-ಸಾ-ಪ್ರಕರಣ-ಬೊಲೆರೋ-ಚಾಲಕ

ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ದಿ. ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು.

ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಬಳಸಿದ್ದರಿಂದ ವಿಷಾನಿಲ ಬಿಡುಗಡೆ ಆಗಿದೆ. ಇದನ್ನು ಆಕಸ್ಮಿಕವಾಗಿ ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಶಾರಿಕ್ ದ್ವಿತೀಯ ಪಿಯುಸಿ ಮುಗಿಸಿದ್ದು, ಮೂಡುಬಿದಿರೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶಾತಿ ಪಡೆದಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *