Wed. Dec 4th, 2024

Bihar: ನರ್ಸರಿ ಶಾಲೆಯ ಬಾಲಕನಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ

ಬಿಹಾರ :(ಜು.31) ನರ್ಸರಿ ಶಾಲೆಯ ಬಾಲಕನಿಗೆ ಗುಂಡು ಹಾರಿಸಿರುವ ಘಟನೆ ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್‌ನ ಲಾಲ್ ಪಟ್ಟಿಯಲ್ಲಿರುವ ಸೇಂಟ್ ಜಾನ್ಸ್ ಸ್ಕೂಲ್‌ನಲ್ಲಿ ನಡೆದಿದೆ.

ಇದನ್ನೂ ಓದಿ: 🛑Wayanad landslide : ವಯನಾಡ್‌ ಭೀಕರ ಭೂಕುಸಿತದ ಬಗ್ಗೆ ಅಮಿತ್‌ ಶಾ ಹೇಳಿದ್ದೇನು?

ಗುಂಡು ಹಾರಿಸಿದವ 5 ವರ್ಷದ ಬಾಲಕ ಎಂದು ತಿಳಿದು ಬಂದಿದೆ. ಗಂಡು ಮಗುವಿನ ಎಡಗೈಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದೆ.

ಗಾಯಗೊಂಡ ವಿದ್ಯಾರ್ಥಿ ಆಸಿಫ್ ಎಂದು ಗುರುತಿಸಲಾಗಿದೆ. ಆಸಿಫ್‌ನನ್ನು ನಗರದ ತ್ರಿವೇಣಿ ಗಂಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡು ಹಾರಿಸಿದ ಬಾಲಕ ಶಾಲೆಯ ಪ್ರಾರ್ಥನೆ ಮುನ್ನ ಬ್ಯಾಗಿನಿಂದ ಗನ್ ತೆಗೆದು ಶೂಟ್ ಮಾಡಿದ್ದಾನೆ.

ಆರೋಪಿಯಾಗಿರುವ ಬಾಲಕ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆಡಳಿತ ಮಂಡಳಿ ಪ್ರಕಾರ ಘಟನೆ ನಂತರ ಎರಡು ಕುಟುಂಬದವರ ಜೊತೆ ಮಾತುಕತೆ ನಡೆಸಲಾಯಿತು.

ಇದೇ ವೇಳೆ ವಿದ್ಯಾರ್ಥಿ ಏಕಲವ್ಯ ಹಾಗೂ ಆತನ ತಂದೆ ಮುಕೇಶ್ ಯಾದವ್ ಶಾಲೆಯ ಪ್ರಾಂಶುಪಾಲರ ಚೇಂಬರ್‌ನಲ್ಲಿದ್ದರು. ಘಟನೆ ಕುರಿತು ಮಾತುಕತೆ ನಡೆಸುವಾಗ ಮುಕೇಶ್ ಯಾದವ್ ಹಾಗೂ ಆತನ ಮಗ ಏಕಲವ್ಯ ಇಬ್ಬರು ಪಿಸ್ತೂಲ್ ಹಿಡಿದುಕೊಂಡು ತಪ್ಪಿಸಿಕೊಂಡರು.

ಈ ವೇಳೆ ಗಾಯಗೊಂಡಾತನ ಮನೆಯವರು ಆತನಿಂದ ಪಿಸ್ತೂಲ್ ಅನ್ನು ಕಸಿದುಕೊಂಡಿದ್ದಾರೆ. ತ್ರಿವೇಣಿಗಂಜ್ ಪೋಲಿಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *