ಉಜಿರೆ:(ಆ.1) ಪ್ರತಿಯೊಬ್ಬನ ಜೀವನದಲ್ಲಿ ಶಾಲಾ ದಿನಗಳು ಎಷ್ಟೊಂದು ಮಹತ್ವಪೂರ್ಣವಾಗಿರುತ್ತದೆಯೋ, ಅಷ್ಟೇ ಗುರುಗಳು ನಮ್ಮ ಜೀವನ ರೂಪಿಸುವಲ್ಲಿ ಪ್ರಮುಖ ಸ್ಥಾನ ಪಡೆದಿರುತ್ತಾರೆ.
ಇದನ್ನೂ ಓದಿ: 🔴ಬೆಳ್ತಂಗಡಿ: ತಾಲೂಕಿನಲ್ಲಿ ಭಾರೀ ಮಳೆ, ಎಚ್ಚರ ವಹಿಸುವಂತೆ ಶಾಸಕ ಹರೀಶ್ ಪೂಂಜ ಮನವಿ
ಪಾಠದ ಜೊತೆಗೆ ಆಟ, ಶಿಸ್ತು, ಜೀವನ ಕ್ರಮ, ಸರಿಯಾದ ಮಾರ್ಗದರ್ಶನ , ಸತ್ಯ ಪಥದಲ್ಲಿ ನಡೆಯಲು ಪ್ರೇರಣೆ, ಜ್ಞಾನ, ಜೀವನದಲ್ಲಿ ಮಹತ್ವಾಕಾಂಕ್ಷೆ ಎಲ್ಲವನ್ನೂ ನಮ್ಮೊಳಗೆ ಅಳವಡಿಸಿಕೊಳ್ಳಲು ಶಿಕ್ಷಕರ ಪಾತ್ರ ಮಹತ್ತರವಾಗಿರುತ್ತದೆ.
ಅಂತಹ ಒಬ್ಬ ಅದ್ಭುತ ಶಿಕ್ಷಕಿ ಸರಳ ಸಜ್ಜನಿಕೆ ಮೆರೆಯುತ್ತಾ, ಸಾವಿರಾರು ಮಕ್ಕಳಿಗೆ ವಿದ್ಯೆ ಬುದ್ಧಿ ಕಲಿಸಿ, ಸುಮಾರು ನಲವತ್ತು ವರುಷಗಳ ಕಾಲ ನಿರಂತರ ಶಿಕ್ಷಣ ಸೇವೆ ಸಲ್ಲಿಸಿದ ರೀಟಾ ಟೀಚರ್ ನಿವೃತ್ತರಾಗಿದ್ದಾರೆ.
1983ರಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ತಮ್ಮ ವೃತ್ತಿ ಧರ್ಮ ಆರಂಭಿಸಿರುವ ಲೀನಾ ರೀಟಾ ಮೊರಾಸ್ ಅವರು ಸುಮಾರು ಹದಿಮೂರು ವರ್ಷಗಳು ದುಡಿದು ನಂತರ ಮಾಚಾರ್ ಗ್ರಾಮದ ಸರಕಾರಿ ಶಾಲೆ ಬದನಾಜೆಯಲ್ಲಿ ಇಪ್ಪತ್ತು ವರುಷಗಳು ಸೇವೆ ಸಲ್ಲಿಸಿ,
ನಂತರದ ಎಂಟು ವರುಷಗಳು ಕಕ್ಕಿಂಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಯೂ ಸೇವೆ ಸಲ್ಲಿಸಿ, ಒಟ್ಟು 41ವರುಷಗಳು ಶಿಕ್ಷಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇವರ ಸರಳತೆ, ಆತ್ಮೀಯತೆ, ಕಠಿಣ ಪರಿಶ್ರಮ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.
ಇವರ ನಿವೃತ್ತ ಜೀವನ ಸುಖಕರವಾಗಿರಲಿ ಹಾಗೂ ಭಗವಂತನು ಆಯುರಾರೋಗ್ಯ ನೀಡಿ ಹರಸಲಿ. ಇವರ ನಡೆ, ನುಡಿ, ಜ್ಞಾನ ಇನ್ನೂ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದ್ದಾರೆ.
Best wishes from:
Husband: Leo John D’Souza
Sister: Mary Moras
Daughter/ Son in law: Lavita & Vishwas Pinto
Son: Clinton D’Souza
Grandchildren: Jonathan, Noah