Wed. Dec 4th, 2024

Bengaluru: ಹಾಡಹಗಲೇ ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ

ಬೆಂಗಳೂರು:(ಆ.2) ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಯುವಕನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ರಸ್ತೆ ಮಧ್ಯೆ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: Bengaluru: ಹಾಡಹಗಲೇ ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ

ಶೇಷಾದ್ರಿಪುರಂ ಪೊಲೀಸ್ ಠಾಣೆಯ ಸ್ಟ್ರೀಟ್‌ನಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ್ ಗ್ಯಾಂಗ್ ಮನಬಂದಂತೆ ಲಾಂಗು ಮಚ್ಚುಗಳಿಂದ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದೆ.

ಅಜಿತ್ ಕುಮಾರ್ (27) ಕೊಲೆಯಾದ ಯುವಕ. ಅಜಿತ್ ಕುಮಾರ್ 2022 ರಲ್ಲಿ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ. ಇತ್ತೀಚಿಗಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದಿದ್ದ.

ಬಳಿಕ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಜಿತ್ ಕುಮಾರ್ ಊಟ ಮುಗಿಸಿಕೊಂಡು ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಹಂತಕರು ಬಂದು ಕೊಲೆ ಮಾಡಿದ್ದಾರೆ.

ನೂರು ಮೀಟರ್ ಅಷ್ಟು ದೂರ ಅಟ್ಟಾಡಿಸಿ ತಲೆ ಭಾಗ ಸೇರಿ ಹಲವು ಕಡೆ ದಾಳಿ ಮಾಡಿ ಹತ್ಯೆಗೈದು ಹಂತಕರು ತಲೆಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಕೊಲೆಯಾಗಿರುವ ವ್ಯಕ್ತಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹಾಗಾಗಿ ಹಳೆ ದ್ವೇಷ ಇಟ್ಟುಕೊಂಡವರೇ ಅಜಿತ್ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಶೇಷ ತಂಡಗಳನ್ನು ರಚಿಸಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *