Sat. Dec 14th, 2024

Daily Horoscope : ಇಂದು ಈ ರಾಶಿಯವರಿಗೆ ಮಕ್ಕಳೊಂದಿಗೆ ವೈಮನಸ್ಸು ಉಂಟಾಗಬಹುದು

Daily Horoscope - ಇಂದು ಈ ರಾಶಿಯವರಿಗೆ ಸ್ನೇಹಿತರ ಸಹವಾಸವೇ ಕಂಟಕವಾಗಬಹುದು!!!!

ಮೇಷ ರಾಶಿ: ನಿಮ್ಮ ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಇಷ್ಟು ದಿನ ನಿಮ್ಮದೂ ಎಂದುಕೊಂಡ ವಸ್ತುವು ಇನ್ನೊಬ್ಬರ ಸ್ವತ್ತಾಗುವ ಸಾಧ್ಯತೆ ಇದೆ. ನೀವು ಮಾಡಬೇಕೆಂದುಕೊಂಡ ಕೆಲಸವು ವಿಪರೀತ ಪರಿಣಾಮವನ್ನು ಬೀರಿತು. ಎಲ್ಲದಕ್ಕೂ ಅಪಾರ್ಥ ಮಾಡಿಕೊಳ್ಳುತ್ತಾ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ.

ವೃಷಭ ರಾಶಿ: ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ಆತುರದ ತೀರ್ಮಾನ ಹಾಗೂ ಒತ್ತಡಕ್ಕೆ ಸಿಲುಕದೇ ಜಾಗರೂಕರಾಗುರಿ. ಇಂದು ನಿಮ್ಮ ಸಾಲವು ಮರಳಿಬರುವುದು. ಸ್ನೇಹಿತರು ತಮ್ಮ ಜೊತೆ ಕರೆದುಕೊಂಡು ಹೋಗಬಹುದು.

ಮಿಥುನ ರಾಶಿ: ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ನಿಮ್ಮವರೇ ಆದರೂ ಅವರ ಜೊತೆ ಹೆಚ್ಚಿನ ವ್ಯವಹಾರವು ಬೇಡ. ಹಣದ ವಿಚಾರವು ಯಾರನ್ನೂ ಬಿಡದು. ಮಕ್ಕಳ ಜೊತೆ ವೈಮನಸ್ಯ ಬರಬಹುದು. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಗಳು ಸಿಗಲಿವೆ.

ಕರ್ಕಾಟಕ ರಾಶಿ: ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ಯಾರ ಬಗ್ಗೆಯೂ ಗೊತ್ತಿಲ್ಲದೇ ಮಾತನಾಡುವುದು ಬೇಡ. ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸಲು ಕಷ್ಟವಾದರೂ ಅನಿವಾರ್ಯವಾಗಿ ಬಿಡಬೇಕಾದೀತು.‌ ಮನೆಯ ಕೆಲಸದಲ್ಲಿ ನೀವು ನೀವಿಂದು ಮಗ್ನರಾಗಿರುವಿರಿ.

ಸಿಂಹ ರಾಶಿ: ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಿಷ್ಟದಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಗುರಿಗಳು ಸ್ಪಷ್ಟವಾಗಿ ಇದ್ದರೂ ಇನ್ನೊಬ್ಬರ ಪ್ರೋತ್ಸಾಹವನ್ನು ನೀವು ಬಯಸುವಿರಿ. ಪ್ರಯಾಣವು‌ ಇಂದು ನಿಮಗೆ ಇಷ್ಟವಾಗದೇ ಹೋಗುವುದು. ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿದೆ.

ಕನ್ಯಾ ರಾಶಿ: ಹೊಸ ವಿದ್ಯುತ್ ಉಪಕರಣಗಳು ನಿಮಗೆ ಸಂತೋಷವನ್ನು ಕೊಡುತ್ತವೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಪೂರ್ವಾಪರ ಆಲೋಚನೆ ಬೇಕು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಹೊರ ಹಾಕಿಯಾರು. ಸಂಗಾತಿಯ ನೋವಿಗೆ ಸ್ಪಂದಿಸಿವುದು ಕಷ್ಟವಾದೀತು.

ತುಲಾ ರಾಶಿ: ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಅಪರಿಚಿತ ವಿಷಯಕ್ಕೆ ಮೌನವಾಗಿ ಇರುವಿರಿ. ಸ್ನೇಹಿತರು ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಬೇಸರಗೊಳ್ಳುವಿರಿ. ಆರ್ಥಿಕ ವಿಚಾರಕ್ಕೆ ಅಪವಾದವು ಬರುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ದುಸ್ಸಾಹಸಗಳು ನಿಮ್ಮ ಧೈರ್ಯವನ್ನು ಕೆಡಿಸಬಹುದು. ಅನ್ಯ ಕಾರ್ಯಗಳಿಂದ ನಿಮ್ಮ ಸಮಯವು ವ್ಯರ್ಥವಾಗಿ ನಿಮ್ಮ ಕೆಲಸಕ್ಕೆ ಸಮಯದ ಅಭಾವವಾದೀತು. ತಪ್ಪಿಗೆ ದಂಡ ತೆರಬೇಕಾದೀತು. ಇಂದು ನೀವು ಮಾತು ಕಡಿಮೆ ಮಾಡಿದಷ್ಟೂ ನಿಮಗೆ ಅನುಕೂಲವಿದೆ.

ಧನು ರಾಶಿ: ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಎಲ್ಲರ ಜೊತೆ ಬೆರೆಯುವ ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋದೀತು. ಕಷ್ಟವೋ ಸುಖವೋ ಹೊತ್ತ ಜವಾಬ್ದಾರಿಗೆ ನ್ಯಾಯವನ್ನು ಕೊಡಬೇಕು.

ಮಕರ ರಾಶಿ: ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ನಿಮ್ಮ ಪ್ರಯಾಣವನ್ನು ನಿಲ್ಲಿಸುವುದು ಬೇಡ. ಸ್ನೇಹಿತರಿಂದ ನೀವು ದೂರವಿರುವ ಯೋಚನೆ ಮಾಡುವಿರಿ. ನಿಮಗೆ ಬೆಂಬಲವನ್ನು ಕುಟುಂಬದವರು ಕೊಡುವರು. ಬದ್ಧತೆಗೆ ಬೆಲೆ ಕೊಡಬೇಕಾಗುವುದು.

ಕುಂಭ ರಾಶಿ: ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಏನು ಮಾಡಬೇಕು ಎಂಬ ಭ್ರಾಂತಿಯೂ ಕಾಡುವುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.

ಮೀನ ರಾಶಿ: ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಎಲ್ಲವನ್ನೂ ಎದುರಿಸಲು ಸಾಧ್ಯವಾಗುವುದು. ವಿಶೇಷ ಸಮಾರಂಭಕ್ಕೆ ಆಹ್ವಾನ ಬರಬಹುದು. ನೀವು ನಿಮ್ಮ ಘನತೆಯನ್ನು ಬಿಟ್ಟುಕೊಡಲು ಒಪ್ಪುವುದಿಲ್ಲ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು