Sat. Dec 7th, 2024

Parashurama Theme Park : ಬೆಂಗಳೂರಿನ ಗೋಡೌನ್ ನಲ್ಲಿ ಪರಶುರಾಮ ಮೂರ್ತಿಯ ಅರ್ಧ ಭಾಗ ಪತ್ತೆ

ಬೆಂಗಳೂರಿನ ಗೋಡೌನ್ ನಲ್ಲಿ ಪರಶುರಾಮ ಮೂರ್ತಿಯ ಅರ್ಧ ಭಾಗ ಪತ್ತೆ

ಬೆಂಗಳೂರು (ಜು. 04) : ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಗೋಡೌನ್ ನಲ್ಲಿ ಕಾರ್ಕಳ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.


ಕೆಂಗೇರಿ ಹತ್ತಿರದಲ್ಲಿರುವ ಗೋಡೌನ್ ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಬಳಸಿರುವ ವಸ್ತುಗಳ ಪರಿಶೀಲನೆ ನಡೆದಿದೆ. ಒಟ್ಟು 9 ಟನ್ ತೂಕದ ಕಂಚಿನ ಬಿಡಿ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಗೋಡೌನ್ ನಲ್ಲಿ ಮೂರ್ತಿಯ ಅರ್ಧ ಭಾಗ ಕೂಡಾ ಪತ್ತೆಯಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರು ಸಿ. ಐ. ಡಿ ತನಿಖೆಗೆ ಆದೇಶ ನೀಡಿದ್ದರು.

Leave a Reply

Your email address will not be published. Required fields are marked *