Sun. Mar 23rd, 2025

Thosghar water falls : ಸೆಲ್ಫಿ ಹುಚ್ಚಿನಿಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವತಿ

ಸೆಲ್ಫಿ ಹುಚ್ಚಿನಿಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಯುವತಿ

ಮಹಾರಾಷ್ಟ್ರ (ಜು. 04): ಮಹಾರಾಷ್ಟ್ರದ ಬೋರನೆ ಘಾಟ್ ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿ 60 ಅಡಿ ಪ್ರಪಾತಕ್ಕೆ ಬಿದ್ದಿರುವ ಘಟನೆ ನಡೆದಿದೆ. ಪುಣೆಯ ತಂಡವೊಂದು ತೊಸ್ಘರ್ ಜಲಪಾತಕ್ಕೆ ಭೇಟಿ ನೀಡಿದ್ದು ತೀವ್ರ ಮಳೆಯಿಂದ ಜಲಪಾತ ಉಕ್ಕಿ ಹರಿಯುತ್ತಿದೆ.

ಸೆಲ್ಫಿ ತೆಗೆದುಕೊಳ್ಳುವ ಸಂದರ್ಭ 29 ವರ್ಷದ ನಸ್ರೀನ್ ಅಮೀರ್ ಖುರೇಷಿ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದರು. ಸ್ಥಳೀಯರು ಹಾಗೂ ಗೃಹರಕ್ಷಕ ದಳದ ಸಹಾಯದಿಂದ ತಕ್ಷಣವೇ ಯುವತಿಯನ್ನು ಹೊರತೆಗೆದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *