ಗುರುವಾಯನಕೆರೆ:(ಆ.5) ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ.
ಇದನ್ನೂ ಓದಿ: 🔴ಕಾರ್ಕಳ: ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಆಶ್ರಯದಲ್ಲಿ ದ್ವಿತೀಯ ವರ್ಷದ “ಕೆಸರುಡು ಒಂಜಿ ದಿನ”
ಎಂದು ಆರೋಪಿಸಿ ನೌಕರರು ಆಕ್ರೋಶ ಹೊರಹಾಕಿ ಡಿಪಿ ಕಂಪನಿ ವಿರುದ್ಧ ಮುಷ್ಕರ ನಡೆಸುತ್ತಿರುವ ಘಟನೆ ಓಡಿಲ್ನಾಳ ರೇಷ್ಮೆ ಬಳಿ ಆ.05 ರಂದು ನಡೆದಿದೆ.
ಪುಂಜಾಲಕಟ್ಟೆ ಚಾರ್ಮಾಡಿ ಹೆದ್ದಾರಿ ಕಾಮಗಾರಿಯನ್ನು ಡಿಪಿ ಜೈನ್ ಕಂಪನಿಯು ವಹಿಸಿಕೊಂಡಿದ್ದು, 100 ಕ್ಕೂ ಹೆಚ್ಚಿನ ದಿನಗೂಲಿ ಕಾರ್ಮಿಕರಿಗೆ 3ತಿಂಗಳಿನಿಂದ ಸಂಬಳವನ್ನು ನೀಡದೆ ಸತಾಯಿಸುತ್ತಿದ್ದಾರೆ. ಇದರಿಂದ ಡಿಪಿ ಕಂಪನಿಯ ವಿರುದ್ದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.