Wed. Jan 8th, 2025

Mangalore: ಎನ್‌ಐಟಿಕೆ ಹಳೆ ಟೋಲ್ ಗೇಟ್ ಬಳಿ ಕುರಿಗಳ ಮೃತದೇಹ ಪತ್ತೆ- ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು :(ಆ.5) ಸುರತ್ಕಲ್ ಹಳೆ ಟೋಲ್ ಗೇಟ್ ಬಳಿ ಸತ್ತ ಕುರಿಗಳನ್ನು ಎಸೆದು ಹೋಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: 🛑ಗುರುವಾಯನಕೆರೆ: ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಕಾರ್ಮಿಕರಿಗೆ 3 ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿದ್ದ ಡಿಪಿ ಜೈನ್ ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಘಟನೆಗೆ ಸಂಬಂಧಿಸಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸುಮಾರು 15 ಸತ್ತ ಕುರಿಗಳನ್ನು ಯಾರೋ ಸುರತ್ಕಲ್ ಎನ್‌ಐಟಿಕೆ ಹಳೆ ಟೋಲ್ ಗೇಟ್ ಬಳಿ ಎಸೆದು ಹೋಗಿದ್ದು, ನಿನ್ನೆ (ಆಗಸ್ಟ್ 4) ಬೆಳಗ್ಗೆ ಸ್ಥಳೀಯರು 2ನೇ ವಾರ್ಡ್ ನ ಕಾರ್ಪೋರೇಟರ್ ಶ್ವೇತಾ ಪೂಜಾರಿಯವರಿಗೆ ಮಾಹಿತಿ ನೀಡಿದ ಮೇರೆಗೆ ಅವರು ಮಹಾನಗರಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸತ್ತ ಕುರಿಗಳ ಮೃತದೇಹಗಳನ್ನು ಸುರಕ್ಷಿತ ಸ್ಥಳದಲ್ಲಿ ದಫನ ಮಾಡಿದರು.

ಉತ್ತರ ಕರ್ನಾಟಕ ಕಡೆಯಿಂದ ಕುರಿಸಾಗಾಟ ವಾಹನಗಳಲ್ಲಿ ಮಂಗಳೂರಿಗೆ ಕುರಿ ಮಾರಾಟ ಮಾಡುವ ವ್ಯಾಪಾರಿಗಳು ಸಾಗಾಟದ ವೇಳೆ ಮೃತಪಟ್ಟ ಕುರಿಗಳನ್ನು ವಾಪಾಸು ಹೋಗುವ ವೇಳೆಗೆ ರಸ್ತೆ ಪಕ್ಕದಲ್ಲಿ ಪೊದೆಗಳಲ್ಲಿ ಎಸೆದು ಹೋಗಿರಬಹುದು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಅಂತಹ ವ್ಯಕ್ತಿಗಳ ಪತ್ತೆಗೆ ಕ್ರಮ ವಹಿಸಲಾಗಿದ್ದು, ಕಾವೂರು ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *