ಉಡುಪಿ:(ಆ.6) ನಿಂತಿದ್ದ ಬಸ್ ಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಕಿನ್ನಿಮುಲ್ಕಿಯ ಮಂಜುನಾಥ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
![](https://uplustv.com/wp-content/uploads/2024/07/057b1d26-13c1-450b-9ca4-33b6e7226863-157-810x1024.jpg)
ಇದನ್ನೂ ಓದಿ: 🛑ಮಂಗಳೂರು: ಪಬ್ ನಲ್ಲಿ ಯುವತಿಗೆ ಕಿರುಕುಳ ನೀಡಿದ ಪುತ್ತೂರಿನ ನಾಲ್ವರು ಯುವಕರು
ಗಾಯಗೊಂಡ ಯುವಕರ ವಿಳಾಸ ತಿಳಿದುಬಂದಿಲ್ಲ. ಅತೀ ವೇಗದಲ್ಲಿ ಸುಜುಕಿ ಆಕ್ಸಿಸ್ ನಲ್ಲಿ ಬಂದ ಯುವಕರಿಬ್ಬರು ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆ ಬಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ.
![](https://uplustv.com/wp-content/uploads/2024/07/51b5a0cd-f9b6-499f-a45b-f15e5ee2ea78-155-1024x1024.jpg)
ಆ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.