Wed. Feb 5th, 2025

Dr. Bro: ಫ್ಯಾನ್‌ ಫಾಲೋವಿಂಗ್‌ನಲ್ಲಿ ನಟರಾದ ಕಿಚ್ಚ , ಡಿ ಬಾಸ್‌ ರನ್ನೇ ಹಿಂದಿಕ್ಕಿದ Dr. Bro!

Dr. Bro:(ಆ.7) ಇನ್ಸ್ಟಾಗ್ರಾಮ್‌ನಲ್ಲಿ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ ಡಾ. ಬ್ರೋ ದರ್ಶನ್‌ ಹಾಗೂ ಸುದೀಪ್‌ ಹಿಂದಿಕ್ಕಿದ್ದಾರೆ. ವಿದೇಶಗಳಲ್ಲಿ ಸುತ್ತಾಟ ಮಾಡುತ್ತಾ ಅಲ್ಲಿನ ಆಚಾರ ವಿಚಾರ ಪದ್ದತಿಗಳ ಬಗ್ಗೆ ಕನ್ನಡಿಗರಿಗೆ ಅವರದೇ ಭಾಷೆಯಲ್ಲಿ ಅತ್ಯಂತ ಲೋಕಲ್‌ ಆಗಿ ತಿಳಿಸಿಕೊಡುವ ಗಗನ್‌ ಶ್ರೀನಿವಾಸ್‌ ಅಲಿಯಾಸ್‌ ಡಾ.ಬ್ರೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ. ಕೆಲವು ಸೋಶಿಯಲ್‌ ಮೀಡಿಯಾ ಪೇಜ್‌ಗಳು ಈ ವಿಚಾರವಾಗಿ ಡಾ. ಬ್ರೋಗೆ ಅಭಿನಂದನೆಗಳನ್ನೂ ಸಲ್ಲಿಸಿವೆ.

ಇದನ್ನೂ ಓದಿ; 🛑ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ – ಆರೋಪಿಗಳ ಬಂಧನ

ಸೋಶಿಯಲ್‌ ಮೀಡಿಯಾದಲ್ಲಿ 203 ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಡಾ. ಬ್ರೋಗೆ 2.7 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕಿಚ್ಚ ಸುದೀಪ್‌ ಇನ್ಸ್ಟಾಗ್ರಾಮ್‌ನಲ್ಲಿ 401 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, 2.3 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕಾಟೇರ ಸಿನಿಮಾದ ಮೂಲಕ ಯಶಸ್ಸು ಕಂಡಿರುವ ದರ್ಶನ್‌ ತೂಗುದೀಪ 505 ಪೋಸ್ಟ್‌ಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು 2.1 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆ ಮೂಲಕ ಇನ್ಸ್ಟಾಗ್ರಾಮ್‌ನಲ್ಲಿ ಗರಿಷ್ಠ ಫಾಲೋವರ್ಸ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಡಾ. ಬ್ರೋ, ದರ್ಶನ್‌ ಹಾಗೂ ಸುದೀಪ್‌ ಅವರನ್ನೇ ಹಿಂದಿಕ್ಕಿದ್ದಾರೆ.

Leave a Reply

Your email address will not be published. Required fields are marked *