Thu. Dec 5th, 2024

Udupi: ಹಾಡಹಗಲೇ ನಗರದಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ

ಉಡುಪಿ:(ಆ.7) ನಗರದಲ್ಲಿ ಹಾಡಹಗಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್‌ ಸರ್ಕಲ್‌ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರು ನಿಲುಗಡೆಗೊಳಿಸಿ ಒಳಭಾಗದಲ್ಲಿ ಯುವಕ ಮತ್ತು ಯುವತಿ ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿದ್ದರು. ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಯುವಕ, ಯುವತಿ ಸ್ಥಳದಿಂದ ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: 🔴Vinesh Phogat : ವಿನೇಶ್ ಫೋಗಟ್ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು


ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಲಾಗಿತ್ತು. ಆದರೆ ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದಾಗ ಅನೈತಿಕ ಚಟುವಟಿಕೆಯಲ್ಲಿ ಇಬ್ಬರು ನಿರತರಾಗಿರುವುದು ಕಂಡುಬಂದಿದೆ. ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಇಬ್ಬರು ಮುಜುಗರದಿಂದ ಪರಾರಿಯಾದರು ಎನ್ನಲಾಗಿದೆ. ಕಳೆದ ಒಂದು ವಾರದಿಂದ ಕಾರು ಅನುಮಾನಾಸ್ಪದವಾಗಿ ನಿಲ್ಲುತ್ತಿತ್ತು ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *