Wed. Jan 22nd, 2025

Naga chaitanya: ನಾಗಚೈತನ್ಯ-ಶೋಭಿತಾ ಎಂಗೇಜ್ಮೆಂಟ್ – ಸಮಂತಾ ಫ್ಯಾನ್ಸ್‌ ಗರಂ!!

ಟಾಲಿವುಡ್‌ನ ಮೋಸ್ಟ್‌ ಕ್ಯೂಟ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದ ನಾಗ ಚೈತನ್ಯ ಹಾಗೂ ಸಮಂತಾ ಡಿವೋರ್ಸ್‌ ಬಳಿಕ ಅವರಿಬ್ಬರು ಮತ್ತೆ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಆದರೆ, ಇದೀಗ ಸ್ಟಾರ್‌ ನಟ ನಾಗಚೈತನ್ಯ ಮತ್ತು ನಟಿ ಶೋಭಿತಾ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: 🔴Nag Panchami 2024: ನಾಗರ ಪಂಚಮಿಗೆ ಮನೆಗಳಲ್ಲಿ ಈ ಸಿಹಿ ತಿನಿಸುಗಳದ್ದೇ ಘಮ

ಈ ಫೋಟೊಗಳನ್ನು ನೋಡಿ ಸಮಂತಾ ಅಭಿಮಾನಿಗಳು ಗರಂ ಆಗಿದ್ದಾರೆ. ನಾಗಚೈತನ್ಯಗೆ ಹಿಡಿಶಾಪ ಹಾಕುತ್ತಿದ್ದಾರೆ. ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ಜೀವನದತ್ತ ಹೆಜ್ಜೆಯಿಟ್ಟಿದ್ದಾರೆ.

Leave a Reply

Your email address will not be published. Required fields are marked *