ಶಿರ್ವ :(ಆ.8) ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರ್ವ ನಡಿಬೆಟ್ಟು ಎಂಬಲ್ಲಿ ಸಂಭವಿಸಿದೆ.

ಶಿರ್ವ ನಡೀಬೆಟ್ಟು ಪನಿಮಾರ್ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಮೃತಪಟ್ಟವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುರೇಶ್ ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದು, ತೋಟದಲ್ಲಿರುವ ಹೈ ಟೆನ್ಷನ್ ವಯರ್ ತಗುಲಿ ಅವರು ಸ್ಥಳದಲ್ಲಿಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಶಿರ್ವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.