ಉಡುಪಿ: (ಆ.8) ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ, ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ರಾಜಾಂಗಣದಲ್ಲಿ ರಾಷ್ಟ್ರೀ ಯ ಕೈಮಗ್ಗ ದಿನಾಚರಣೆ ನಡೆಯಿತು.

ಇದನ್ನೂ ಓದಿ: 🔴ಉಡುಪಿ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭೋವಿ ಜನಾಂಗದಿಂದ ಧರಣಿ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಎಂಐಟಿ ನಿವೃತ್ತ ಪ್ರಾಧ್ಯಾಪಕ ನಾರಾಯಣ ಶೆಣೈ, ವೈದ್ಯ ಡಾ। ವಿಜಯೇಂದ್ರ ಅವರು ಕೈಮಗ್ಗ ಮತ್ತು ಗುಡಿಕೈಗಾರಿಕೆಯ ಮಹತ್ವದ ಬಗ್ಗೆ ಪದ್ಮಶಾಲಿ ಸಮುದಾಯದ ಕೊಡುಗೆ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ರಾಂಡ್ ಲಿನನ್ ಶರ್ಟಿಂಗ್ ಅನಾವರಣ ಮಾಡಲಾಯಿತು. ಉಡುಪಿ ಹ್ಯಾಂಡ್ ಲೂಮ್ ವರ್ಲ್ಡ್‌ನ ಕೈಮಗ್ಗ ಪ್ರೀಮಿಯಂ ಸೀರೆಗಳ ಬಿಡುಗಡೆ, ‘ನೇಕಾರಿಕೆಗೆ ಬನ್ನಿ’ ಎನ್ನುವ ಪರಿಕಲ್ಪನೆಯಲ್ಲಿ ನೇಕಾರರಿಗೆ ಮಾಸಿಕ 10 ಸಾ.ರೂ.ಗಳ ಕನಿಷ್ಠ ವೇತನ ಖಾತರಿ ಯೋಜನೆಗೆ ಚಾಲನೆ ನೀಡಲಾಯಿತು. ನೇಕಾರ ಪೋಷಕ ಕೈಮಗ್ಗ ದಾನಿಗಳಿಗೆ ಗೌರವಿಸಲಾಯಿತು. ಸಮರ್ಥ್ ಕೇಂದ್ರ ಸರಕಾರದ ನೇಕಾರ ಸೇವಾ ಕೇಂದ್ರ ಪ್ರಾಯೋಜಿತ ಕೈಮಗ್ಗ ತರ ಬೇತಿ ಕಾರ್ಯಗಾರದ ನೂತನ ಬ್ಯಾಚ್‌ನ ಉದ್ಘಾಟನೆ ನಡೆಯಿತು.
20 ಮಹಿಳಾ ನೇಕಾರರಿಗೆ ಒಂದು ಉಡುಪಿ ಸೀರೆಗೆ ತಲಾ ಮುನ್ನೂರು ರೂ. ಗಳಂತೆ ಪ್ರೋತ್ಸಾಹಧನ ವಿತರಿಸಿ, ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭೆ ಸದಸ್ಯರಾದ ಪ್ರಭಾಕರ್ ಪೂಜಾರಿ, ಕೃಷ್ಣರಾವ್ ಕೊಡಂಚ, ರಜನಿ ಹೆಬ್ಬಾರ್, ವಿಜಯ ಕೊಡವೂರು, ಆಯೋಜನ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್, ಪದ್ಮಶಾಲಿ ಸಮಾಜದ ದೇವಸ್ಥಾನಗಳ ಪ್ರಮುಖರಾದ ಜ್ಯೋತಿ ಪ್ರಸಾದ್ ಶೆಟ್ಟಿಗಾರ್ ಕಿನ್ನಿಮೂಲ್ಕಿ, ಸುರೇಶ್ ಶೆಟ್ಟಿಗಾರ್ ಸಾಲಿಕೇರಿ, ಗಣೇಶ್ ಶೆಟ್ಟಿಗಾರ್ ಗೋಳಂಗಡಿ, ಓಂಪ್ರಕಾಶ್ ಶೆಟ್ಟಿಗಾರ್, ಪ್ರಭಾಶಂಕರ್ ಪದ್ಮಶಾಲಿ, ಜಯಕರ್ ಶೆಟ್ಟಿಗಾರ್, ವಿವೇಕ್ ಪಿ. ಎಸ್., ಸುಂದರ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಪ್ರಸ್ತಾವಿಸಿದರು. ಉಪಾಧ್ಯಕ್ಷ ಮಂಜುನಾಥ್ ಮಣಿಪಾಲ ಸ್ವಾಗತಿಸಿ, ಸದಾಶಿವ ಗೋಳಿಜೋರ ನಿರೂಪಿಸಿದರು.