ಪುತ್ತೂರು:(ಆ.9) ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ಶುಭದಿನದಂದು ವಿಶೇಷ ಕಾರ್ಯಕ್ರಮ ಬೆಳಿಗ್ಗೆ ಗಂಟೆ 5.30ಕ್ಕೆ ಆರಂಭಗೊಂಡಿತ್ತು.
ಇದನ್ನೂ ಓದಿ: ⚖Daily Horoscope: ನಾಗರ ಪಂಚಮಿಯ ಈ ಶುಭದಿನದಂದು ಯಾವ ರಾಶಿಗಳಿಗೆ ಶುಭಫಲ ಇರಲಿದೆ!!
ಬೆಳಿಗ್ಗೆ ಗಂಟೆ 5.30ಕ್ಕೆ ದೇವರಮಾರು ಗದ್ದೆಯಲ್ಲಿರುವ ಮೂಲ ನಾಗಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇ|ಮೂ. ವಸಂತ ಕೆದಿಲಾಯ ಅವರ ವೈದಿಕತ್ವದಲ್ಲಿ ಅಭಿಷೇಕಗಳು ನಡೆದ ಬಳಿಕ ನಾಗತಂಬಿಲ ನಡೆಯಿತು. ಇದೇ ಸಂದರ್ಭ ಬೆಳಿಗ್ಗೆ ಗಂಟೆ 6 ರಿಂದ ದೇವಳದ ಎದುರು ಇರುವ ವಾಸುಕಿ ನಾಗನ ಗುಡಿಯಲ್ಲಿ ಅಭಿಷೇಕಗಳು ಆರಂಭಗೊಂಡಿತು. ಭಕ್ತರು ಸರತಿ ಸಾಲಿನಲ್ಲಿ ಬಂದು ನಾಗ ದೇವರಿಗೆ ಹಾಲು, ಸೀಯಾಳ ಸಮರ್ಪಣೆ ಮಾಡಿದರು.