Wed. Jan 15th, 2025

Bagalkote: ಪವರ್ ಮ್ಯಾನ್‌ಗೆ ಕರೆಂಟ್ ಶಾಕ್ – ಸಾವಿನ ದವಡೆಯಿಂದ ಪಾರಾಗಿದ್ದೇಗೆ?

ಬಾಗಲಕೋಟೆ:(ಆ.10) ವಿದ್ಯುತ್ ಲೈನ್ ಸರಿಪಡಿಸುವ ವೇಳೆ ಅವಘಡ ಸಂಭವಿಸಿ ಪವರ್ ಮ್ಯಾನ್ ಕಂಬದಲ್ಲಿಯೇ ನೇತಾಡಿದ ಅಪಾಯಕಾರಿ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ.‌

ಇದನ್ನೂ ಓದಿ: 🔴ಕೊಕ್ಕಡ:‌ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

ರಬಕವಿ-ಬನಹಟ್ಟಿ ತಾಲ್ಲೂಕಿನ ಮದಲಮಟ್ಟಿ ಗ್ರಾಮದಲ್ಲಿ ಈ ಅವಘಡ ನಡೆದಿದೆ. ಪ್ರವೀಣ್ ಹಿರೇಮಠ (30) ವಿದ್ಯುತ್ ಪ್ರವಹಿಸಿದ ಕಾರಣ ಕಂಬದಲ್ಲಿಯೇ ಬಾಕಿಯಾಗಿದ್ದಾರೆ.‌ ಅದೃಷ್ಟವಶಾತ್ ಜೀವ ಹಾನಿಯಾಗದೇ ಪಾರಾಗಿದ್ದಾರೆ.‌

ಕಂಬದಲ್ಲಿ ಪ್ರವೀಣ್ ನರಳಾಟವನ್ನು ಕಂಡ ಗ್ರಾಮಸ್ಥರು ತಕ್ಷಣ ಹೆಸ್ಕಾಂ ಕಚೇರಿ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ.

ಕರೆಂಟ್​ ಸ್ಥಗಿತಗೊಳಿಸಿದ ಬಳಿಕ ತಕ್ಷಣವೇ ಕಂಬದ ಮೇಲಿಂದ ಲೈನ್ ಮ್ಯಾನ್ ಪ್ರವೀಣ್ ನನ್ನು ಗ್ರಾಮಸ್ಥರು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಸುರಕ್ಷಿತವಾಗಿ ಕೆಳಗಿಳಿಸಿದ ನಂತರ ಪ್ರವೀಣ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *