Tue. Dec 3rd, 2024

Mangalore: ಕೂಳೂರು ಸೇತುವೆ – ಘನವಾಹನಗಳ ಸಂಚಾರಕ್ಕೆ ನಿರ್ಬಂಧ

ಮಂಗಳೂರು:(ಆ.16) ಕರಾವಳಿಯಲ್ಲಿನ ಸೇತುವೆಗಳ ಮೇಲೆ ವಾಹನ ನಿರ್ಬಂಧದ ಪ್ರಕರಣಗಳು ಇದೀಗ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಒಂದೊಂದು ಹಳೆಯ ಬ್ರಿಡ್ಜ್ ಗಳ ಮೇಲಿನ ವಾಹನ ಸಂಚಾರವನ್ನು ನಿರ್ಬಂಧಿಸುತ್ತಾ ಬರುತ್ತಿದೆ. ಇದೀಗ ಕೂಳೂರು ಹಳೆ ಸೇತುವೆ ದುರಸ್ತಿ ಕಾಮಗಾರಿಗೆ ಅನುಕೂಲ ಕಲ್ಪಿಸಲು ಘನ ವಾಹನಗಳು ಕೆಲ ದಿನ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ.

ಇದನ್ನೂ ಓದಿ: 🇮🇳ಧರ್ಮಸ್ಥಳ: ಶ್ರೀ ಧ.ಮಂ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಅಗಸ್ಟ್ 19, 20, 21ರಂದು ಮೂರು ದಿನ ಘನ ವಾಹನಗಳು (ಪ್ರಯಾಣಿಕರ ಬಸ್ಸು ಹೊರತುಪಡಿಸಿ) ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಹಾಗೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗಿನ ಅವಧಿಯಲ್ಲಿ ಮಾತ್ರ ಈ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗುವುದು.

ಈ ದಿನಗಳಂದು ಬೆಳಿಗ್ಗೆ 6 ರಿಂದ 11 ರ ವರೆಗೆ ಹಾಗೂ ಮಧ್ಯಾಹ್ನ 3 ರಿಂದ ರಾತ್ರಿ 10 ರ ಅವಧಿಯಲ್ಲಿ ಉಡುಪಿ ಕಡೆಯಿಂದ ಕೇರಳಕ್ಕೆ ಸಂಚರಿಸುವ ಘನ ವಾಹನಗಳು ಮೂಲ್ಕಿ–ಸುರತ್ಕಲ್‌–ಎಂಆರ್‌ಪಿಎಲ್‌–ಬಜಪೆ–ಕೆಪಿಟಿ–ನಂತೂರು ಮಾರ್ಗವಾಗಿ ಹಾಗೂ ಉಡುಪಿ ಕಡೆಯಿಂದ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ–ಮೂಲ್ಕಿ–ಮೂಡುಬಿದಿರೆ–ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು. ಈ ಮಾರ್ಪಾಡು ಅಗತ್ಯವಿದ್ದರೆ ಆಗಸ್ಟ್‌ 25 ರಿಂದ ಸೆಪ್ಟೆಂಬರ್‌ 25 ರ ವರೆಗೆ ವಿಸ್ತರಿಸಲಾಗುವುದು. ಸೆಪ್ಟೆಂಬರ್‌ 25 ರ ಒಳಗಾಗಿ ಸೇತುವೆಯ ಕೆಲಸವನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

ಕೂಳೂರು ಸೇತುವೆಯ ಸಾಮರ್ಥ್ಯ ಹಾಗೂ ಸ್ಥಿರತೆಯ ಬಗ್ಗೆ ಇದೇ 20 ರ ಒಳಗಾಗಿ ವರದಿ ನೀಡುವಂತೆ ಹಾಗೂ ಇಲ್ಲಿಯ ಹೊಸ ಸೇತುವೆ ಕಾಮಗಾರಿಯನ್ನು ತ್ವರಿತಗೊಳಿಸಿ, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *