ಉಜಿರೆ:(ಆ.16) ಉಜಿರೆಯ ವರ್ತಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಉಜಿರೆಯ ಬಸ್ಟ್ಯಾಂಡ್ ನವರೆಗೂ ಅನುಗ್ರಹ ಶಾಲಾ ಮಕ್ಕಳು ಹಾಗೂ ವರ್ತಕರು ಪಥಸಂಚಲನದೊಂದಿಗೆ ಬಂದು,



ಬಸ್ ಸ್ಟ್ಯಾಂಡ್ ನ ಮುಂಭಾಗದಲ್ಲಿ ಹಿರಿಯ ವರ್ತಕರಾದ ಭರತ್ ಗೌಡ ಮತ್ತು ಉಜಿರೆಯ ಆನುವಂಶಿಕ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ನಮ್ಮ ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್ ಅವರು ಧ್ವಜಾರೋಹಣವನ್ನು ಮಾಡಿದರು.

ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಹೆಚ್ಚಿನ ವರ್ತಕ ಬಂಧುಗಳು ಉಪಸ್ಥಿತರಿದ್ದರು.
