Mon. Feb 17th, 2025

Mangaluru : ಪುಟ್ಟ ಶಾರದೆ ಖ್ಯಾತಿಯ ಬೇಬಿ ತ್ರಿಷ್ಣ ಅಭಿನಯದ “ಪುರ್ಕಟ್ ಕಿನ್ನಿ” ಆಲ್ಬಮ್ ಸಾಂಗ್ ಬಿಡುಗಡೆ

ಪುಟ್ಟ ಶಾರದೆ ಖ್ಯಾತಿಯ ಬೇಬಿ ತ್ರಿಷ್ಣ ಅಭಿನಯದ "ಪುರ್ಕಟ್ ಕಿನ್ನಿ" ಆಲ್ಬಮ್ ಸಾಂಗ್ ಬಿಡುಗಡೆ

ಮಂಗಳೂರು : ಬೇಬಿ ತ್ರಿಷ್ಣ ಅಭಿನಯಿಸಿದ “ಪುರ್ಕಟ್ ಕಿನ್ನಿ” ಆಲ್ಬಮ್ ಸಾಂಗ್ ಮಂಗಳೂರು ಹೊರವಲಯದ ಸುರತ್ಕಲ್ನ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಬಿಡುಗಡೆ ಗೊಳಿಸಲಾಯಿತು.

ಬೇಬಿ ತ್ರಿಷ್ಣ (ಪುಟ್ಟ ಶಾರದೆ ) ಇವರು ಮೊದಲ ಬಾರಿಗೆ ಮೂರುವರೆ ವರ್ಷಕ್ಕೆ ಸುರತ್ಕಲ್ನಲ್ಲಿ ನಡೆದ ಶ್ರೀ ಕೃಷ್ಣ ಜನ್ಮ ಅಷ್ಟಮಿಗೆ ಕೃಷ್ಣನ ವೇಷ ಧರಿಸಿ ಜನರ ಮನ ಗೆದ್ದಿದ್ದು, ನಂತರ 2023ರಲ್ಲಿ ದಸರಾದ ಶೋಭಾಯಾತ್ರೆ ಯಲ್ಲಿ ಪುಟ್ಟ ಶಾರದೆಯಾಗಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿರುತ್ತಾರೆ. ಹಾಗೆಯೇ ಕಿರು ಚಿತ್ರದಲ್ಲಿ ತಮ್ಮ ಪಾತ್ರವನ್ನು ಮನ ಮುಟ್ಟುವಂತೆ ಅಭಿನಯ ಮಾಡಿರುತ್ತಾರೆ. ಹಾಗೆ “ಪುರ್ಕಟ್ ಕಿನ್ನಿ” ಆಲ್ಬಮ್ ಗೀತೆಗೆ ಅಭೂತಪೂರ್ವ ಅಭಿನಯವನ್ನು ಮಾಡಿದ್ದಾರೆ. ಇವರಿಗೆ “ಪುಟ್ಟ ಶಾರದೆ “ ಅನ್ನುವ ಬಿರುದನ್ನು ಪಡೆದಿರುತ್ತಾರೆ ಇದನ್ನ ಗುರುತಿಸಿ ಸಂಘಟಕರು ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಗಳು ಸನ್ಮಾನಿಸಿದರು . ಸನ್ಮಾನದ ಬಳಿಕ ಬೇಬಿ ತ್ರಿಷ್ಣ ಪುರ್ಕಟ್ ಕಿನ್ನಿ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು