Tue. Mar 25th, 2025

Chitradurga: ರೈಲಿನಲ್ಲಿ 34 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿತ್ರದುರ್ಗ:(ಆ.24) ಒಡಿಶಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ 34 ಲಕ್ಷ ರೂ. ಮೌಲ್ಯದ ಗಾಂಜಾವನ್ನು ರೈಲ್ವೆ ಪೊಲೀಸರು ಚಿತ್ರದುರ್ಗದ ಬಳಿ ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: 🛑ಪಡುಬಿದ್ರಿ: ಪಡುಬಿದ್ರಿಯಲ್ಲಿ ವಾಹನಗಳ ಸಾಮೂಹಿಕ ಆತ್ಮಹತ್ಯೆ.!!

ಚಿತ್ರದುರ್ಗದ ಬಳಿ ರೈಲಿನ ಬೋಗಿಯೊಂದರಲ್ಲಿ ತಲಾ 17 ಕೆಜಿ ತೂಕದ ಎರಡು ಬ್ಯಾಗ್ ಗಳಲ್ಲಿ 34 ಕೆಜಿ ಗಾಂಜಾ ಪತ್ತೆಯಾಗಿದೆ. ಆರೋಪಿಗಳು ಒಂದು ಬೋಗಿಯಲ್ಲಿ ಗಾಂಜಾವನ್ನಿಟ್ಟು ಇನ್ನೊಂದು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ.

ಪೊಲೀಸರು ಗಾಂಜಾವನ್ನು ಪತ್ತೆ ಹಚ್ಚುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದಾವಣಗೆರೆ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *